ತೀರ್ಥಹಳ್ಳಿಯ ತುಂಗಾ ಕಮಾನು ಸೇತುವೆ ಮೇಲೆ ಇಂದು ಮತ್ತು ನಾಳೆ ವಾಹನ ಸಂಚಾರ ಬಂದ್! tth

ತೀರ್ಥಹಳ್ಳಿಯ ತುಂಗಾ ಕಮಾನು ಸೇತುವೆ ಮೇಲೆ ಇಂದು ಮತ್ತು ನಾಳೆ ವಾಹನ ಸಂಚಾರ ಬಂದ್!
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತವಾಗಿ
ಪ್ರಸಿದ್ಧವಾದಂತಹ ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವಂತಹ
ಜಯಚಾಮರಾಜೇಂದ್ರ ಸೇತುವೆಯ ಮೇಲ್ಬಾಗದಲ್ಲಿ ಸುಣ್ಣ
ಬಣ್ಣ ಹಾಗೂ ಹೆಸರು ಬರೆಯುವ ಉದ್ದೇಶದಿಂದಾಗಿ ಇಂದು ಮತ್ತು ನಾಳೆ ಈ ಸೇತುವೆಯ ಮೇಲೆ ವಾಹನ ಓಡಾಟವನ್ನ ಸಂಪೂರ್ಣ ನಿಷೇಧಿಸಲಾಗಿದೆ.

ತುಂಗಾ ಕಮಾನು ಸೇತುವೆಯ ಮೇಲ್ಬಾಗದಲ್ಲಿ ಸುಣ್ಣ ಬಣ್ಣ
ಹೊಡೆಯುವ ಉದ್ದೇಶದಿಂದಾಗಿ ಈ ಸೇತುವೆಯ ಮೇಲೆ
ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಬಾಳೆಬೈಲಿನ ಬೈಪಾಸ್ ರಸ್ತೆಯ ಮೂಲಕ ಕುರುವಳ್ಳಿಯನ್ನು ಹಾಗೂ ಕೊಪ್ಪ ಭಾಗದಿಂದ ಬರುವವರು ಬೈಪಾಸ್ ಮೂಲಕ ತೀರ್ಥಹಳ್ಳಿ ಪಟ್ಟಣಕ್ಕೆ ಹೋಗಬಹುದಾಗಿದೆ.

ಜಾತ್ರೆಗೆ ತುಂಗಾ ಕಮಾನು ಸೇತುವೆಯು ಸುಂದರವಾಗಿ
ಕಾಣುವ ಉದ್ದೇಶದಿಂದ ಸಾರ್ವಜನಿಕರೆಲ್ಲರೂ ಸಹ
ಸಹಕರಿಸಬೇಕು ಎಂದು ಈ ಮೂಲಕ ಮನವಿ ಮಾಡಲಾಗಿದೆ.
Previous Post Next Post