ರಾಜಕೀಯದಿಂದ ಸದ್ಯಕ್ಕೆ ನಿವೃತ್ತಿ ಇಲ್ಲ - ಜಾತ್ರೆ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯದ ಸುಳಿವಿನ ಹೇಳಿಕೆ..! Araga jnanendra

ರಾಜಕೀಯದಿಂದ ಸದ್ಯಕ್ಕೆ ನಿವೃತ್ತಿ ಇಲ್ಲ - ಜಾತ್ರೆ ಪತ್ರಿಕಾಗೋಷ್ಠಿಯಲ್ಲಿ ರಾಜಕೀಯದ ಸುಳಿವಿನ ಹೇಳಿಕೆ..!

ತೀರ್ಥಹಳ್ಳಿ : ಅತ್ಯಂತ ಕುತೂಹಲ ಮೂಡಿಸಿರುವ ಚುನಾವಣೆ ಕ್ಷೇತ್ರವಾಗಿರುವ ತೀರ್ಥಹಳ್ಳಿಯಲ್ಲಿ ತ್ರಿಮೂರ್ತಿಗಳ ರಾಜಕಾರಣ ರಣರಂಗ ಆಗಿದ್ದು ಈಗ ಈ ವಿಚಾರಕ್ಕೆ ಶಾಸಕ ಆರಗ ಜ್ಞಾನೇಂದ್ರ ಅವರು ಸಂಚಲನದ ಹೇಳಿಕೆ ನೀಡಿದ್ದು ಪತ್ರಕರ್ತರು ಸೇರಿ ಹಲವರು ಹಾಸ್ಯ ಚಟಾಕಿ ಹಾರಿಸಿದರು.

ಜಾತ್ರಾ ಸಂದರ್ಭದಲ್ಲಿ ಜಾತ್ರಾ ಸಮಿತಿ ವತಿಯಿಂದ ಗೌರವ ಅಧ್ಯಕ್ಷರಾದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ್ ಗೌಡ ಅವರಿಗೆ ಗೌರವ ಸನ್ಮಾನ ಮಾಡುವುದಾಗಿ ಹೇಳುತ್ತಿದ್ದಂತೆ ನಮಗೆಲ್ಲ ಬೇಡ ನಾವು ರಾಜಕೀಯ ನಿವೃತ್ತಿ ಹೊಂದುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಈ ಮಾತು ಕೇಳಿ ಮುಂದಿನ ಬಾರಿ ಸಹ ಆರಗ ಜ್ಞಾನೇಂದ್ರ ಅವರೇ ಚುನಾವಣೆ ನಿಲ್ಲುತ್ತಾರೆ ಎಂಬುದನ್ನು ಸುಳಿವು ನೀಡಿದರೆ ಎಂಬುದು ಕುತೂಹಲ ಮೂಡಿಸಿದೆ..

2023 ರ ಚುನಾವಣೆಯಲ್ಲಿ ಕೊನೆಯ ಚುನಾವಣೆ ಎಂಬ ಮಾತು ಕೇಳಿ ಬಂದಿತ್ತು. ಆ ನಂತರ ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳ ಹೆಸರು ಸಹ ಕೇಳಿ ಬಂದಿದ್ದವು. ಆದರೆ ಜಾತ್ರೆಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತಹ ಹೇಳಿಕೆ ಈಗ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ..
Previous Post Next Post