ಎಳ್ಳಮಾವಾಸ್ಯೆ ಜಾತ್ರೆಗೆ ಸಕಲ ಸಿದ್ಧತೆ - ಈ ಬಾರಿ ಒಂದು ವಾರಗಳ ಕಾಲ ಅನ್ನಸಂತರ್ಪಣೆ jatre

ಎಳ್ಳಮಾವಾಸ್ಯೆ ಜಾತ್ರೆಗೆ ಸಕಲ ಸಿದ್ಧತೆ - ಈ ಬಾರಿ ಒಂದು ವಾರಗಳ ಕಾಲ ಅನ್ನಸಂತರ್ಪಣೆ
ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತ  ಶ್ರೀ ರಾಮೇಶ್ವರ ದೇವಸ್ಥಾನ ಅನ್ನದಾಸೋಹ ಮಿತ್ರ ವೃಂದ ವತಿಯಿಂದ ಈ ವರ್ಷ ಒಂದು ವಾರಗಳ ಕಾಲ ಅನ್ನ ಸಂತರ್ಪಣೆ ಇರಲಿದೆ.
ಡಿ.11ರ ಗುರುವಾರದಿಂದ ಹಸಿರು ಹೊರೆ ಕಾಣಿಕೆ ವಾಹನಗಳು ಶ್ರೀ ರಾಮೇಶ್ವರನ ಸನ್ನಿದಿಯಿಂದ ಹೊರಡಲಿದೆ.

ಈ ಬಾರಿ ಡಿಸೆಂಬರ್ 17 ರಿಂದ ಮತ್ತು 23ರ ವರೆಗೆ 7 ದಿನಗಳ ಕಾಲ ಅನ್ನ ಸಂತರ್ಪಣೆ ನಡೆಯಲಿದೆ. 
ಕಳೆದ ವರ್ಷ ಐದು ದಿನಗಳಿಗೆ ಸರಿಸುಮಾರು ಐವತ್ತು ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು.
ಈ ಬಾರಿ ಏಳು ದಿನಗಳು ಅನ್ನಸಂತರ್ಪಣೆ ನಡೆಸಲು ತೀರ್ಮಾನಿಸಲಾಗಿದೆ.

ಹೊರೆ. ಕಾಣಿಕೆ ನೀಡಲು ಭಕ್ತರಲ್ಲಿ ಮನವಿ

ಕಳೆದ ವರ್ಷ ಈ ಕಾರ್ಯಕ್ರಮ ಯಶಸ್ವಿಯಾಗಲು ಸಂಗ್ರಹವಾದ ಹೊರೆಕಾಣಿಕೆಯೇ ಪ್ರಮುಖವಾಗಿದ್ದು, ಈ ವರ್ಷವೂ ಸಹ ಅಕ್ಕಿ -ತರಕಾರಿ - ಧವಸ ಧಾನ್ಯಗಳನ್ನು (ಹಸಿರು ಹೊರೆಕಾಣಿಕೆ) ಶ್ರೀ ರಾಮೇಶ್ವರ ಸಭಾ ಭವನದಲ್ಲಿ ಸ್ವೀಕರಿಸಲಾಗುವುದು ಅಥವಾ ಹೊರೆ ಕಾಣಿಕೆ ವಾಹನವು ನಿಮ್ಮಲ್ಲಿಗೆ ಬಂದಾಗ " ಹಸಿರು ಹೊರೆ ಕಾಣಿಕೆ'' ನೀಡಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಳು ಸಮಿತಿಯವರು ವಿನಂತಿಸಿದ್ದಾರೆ.
Previous Post Next Post