ಜಾತ್ರೆಗೆ " ನ " ನ್ನ "ವಿನ್" ಮಾಡಿದ ಶಿವಮೊಗ್ಗ ಸುದ್ದಿ ಎಂದ ಜಯಚಾಮರಾಜೇಂದ್ರ ಸೇತುವೆ..!
ಶಿವಮೊಗ್ಗ ಸುದ್ದಿ ವರದಿ ಬೆನ್ನಲ್ಲೆ ಕಮಾನು ಸೇತುವೆಗೆ ಸುಣ್ಣ ಬಣ್ಣ
ತೀರ್ಥಹಳ್ಳಿ : ಎಳ್ಳಮಾವಾಸ್ಯೆ ಜಾತ್ರೆಯ ಪ್ರಯುಕ್ತವಾಗಿ
ಪ್ರಸಿದ್ಧವಾದಂತಹ ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವಂತಹ
ಜಯಚಾಮರಾಜೇಂದ್ರ ಸೇತುವೆಗೆ ಸುಣ್ಣ ಬಣ್ಣ ಬಳಿಯಲು ಆರಂಭಿಸಲಾಗಿದೆ. ಜಾತ್ರೆಗೆ ತುಂಗಾ ಕಮಾನು ಸೇತುವೆಯು ಸುಂದರವಾಗಿ ಕಾಣುವ ಉದ್ದೇಶದಿಂದ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು.
ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾಡುವುದಿಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜಾತ್ರೆಗೆ " ನ " ನ್ನ "ವಿನ್" ಮಾಡ್ತಾರಾ? ಎಂದು ಕುಳಿತ ಕಮಾನು ಸೇತುವೆ..! ಎಂಬ ಶಿರೋನಾಮೆಯಡಿಯಲ್ಲಿ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಛೆತ್ತ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಸುಣ್ಣ ಬಣ್ಣ ಬಳಿಯಲು ಮುಂದಾಗಿದ್ದಾರೆ. ಗುತ್ತಿಗೆದಾರರಾದ ಸಾಯಿಪ್ರಾಸದ್ ನೇತೃತ್ವದಲ್ಲಿ ಸುಣ್ಣ ಬಣ್ಣ ಆಗುತ್ತಿದೆ.
ಇನ್ನೊಂದು ವಾರದಲ್ಲಿ ಜಾತ್ರೆ ಆರಂಭ ಆಗಲಿದ್ದು ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಒಟ್ಟು 7 ದಿನಗಳ ಕಾಲ ಅನ್ನ ಸಂತರ್ಪಣೆ ನಡೆಯಲಿದೆ. ಜಾತ್ರೆಗೆ ತಾಲೂಕು ಆಡಳಿತ, ಪಟ್ಟಣ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡುತ್ತಿದೆ. ಒಟ್ಟಿನಲ್ಲಿ ಈ ಬಾರಿ ಎಳ್ಳಮಾವಾಸ್ಯೆ ಜಾತ್ರೆ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಲಿದೆ..
Tags:
ತುಂಗಾ ಸೇತುವೆ