ಕಲಾ ಪ್ರತಿಭೋತ್ಸವದಲ್ಲಿ ಮಿಂಚಿದ ತೀರ್ಥಹಳ್ಳಿಯ ನಾಲ್ವರು ವಿದ್ಯಾರ್ಥಿಗಳು
ತೀರ್ಥಹಳ್ಳಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ, ಇವರು ಆಯೋಜಿಸಿದ್ದ ಕಲಾಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ನಾಲ್ವರು ವಿದ್ಯಾರ್ಥಿಗಳು ಭಾಗಿಯಾಗಿ ಇಬ್ಬರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತೀರ್ಥಹಳ್ಳಿಯ ಸುಮುಖ ಸಂಗೀತ ಹಾಗೂ ನೃತ್ಯ ಶಾಲೆಯಲ್ಲಿ ನೃತ್ಯವನ್ನು ಅಭ್ಯಾಸ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಕಲಾಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಅದ್ಭುತವಾಗಿ ನೃತ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು.
ಅಷ್ಟೇ ಅಲ್ಲದೆ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದರು.
1. ದಿತಿ ಎಚ್ ಎಸ್ - ಶಾಸ್ತ್ರೀಯ ನೃತ್ಯ ವಿಭಾಗ, ಕಿಶೋರ ಪ್ರತಿಭೆ, ಪ್ರಥಮ ಸ್ಥಾನ
2. ವಾಗ್ಮಿ ಎಸ್ ಜೆ, - ಶಾಸ್ತ್ರೀಯ ನೃತ್ಯ ವಿಭಾಗ, ಬಾಲ ಪ್ರತಿಭೆ, ಪ್ರಥಮ ಸ್ಥಾನ
3. ಆದ್ಯಾ ಮಂಜುನಾಥ್ - ಶಾಸ್ತ್ರೀಯ ನೃತ್ಯ ವಿಭಾಗ, ಬಾಲ ಪ್ರತಿಭೆ, ತೃತೀಯ ಸ್ಥಾನ
4. ಪರಮ್ ಗಾಂಧರ್ವ ಎಚ್ ಪಿ - ತಬಲ ವಿಭಾಗ, ಬಾಲ ಪ್ರತಿಭೆ, ದ್ವಿತೀಯ ಸ್ಥಾನ
ಈ ವಿದ್ಯಾರ್ಥಿಗಳಲ್ಲಿ ಇಬ್ಬರು ಪ್ರತಿಷ್ಠಿತ ವಾಗ್ದೇವಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣವನ್ನ ಪಡೆಯುತ್ತಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ನೃತ್ಯ ಶಾಲೆಯ ವಿದ್ಯಾರ್ಥಿಗಳು ಪೋಷಕರು ಶುಭ ಹಾರೈಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ