ರಾಜಕೀಯ ಬಿಟ್ಟು ರಾಮೇಶ್ವರನ ಕೆಲಸ ಮಾಡೋಣ - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಈ ಮೊದಲು ಬೇರೆ ಬೇರೆ ಜವಾಬ್ದಾರಿ ಇದ್ದಂತವರು ಧಾರ್ಮಿಕ ಕೆಲಸ ಮಾಡುತ್ತಿದ್ದರು. ಈಗ ತಹಸೀಲ್ದಾರ್ ಅವರು ಶಾಸಕರು, ಹಾಗೂ ರಾಜಕೀಯದವರನ್ನು ಕರೆಸುತ್ತಾರೆ. ಹಾಗಾಗಿ ನಾವೆಲ್ಲರೂ ರಾಜಕೀಯ ಬಿಟ್ಟು ರಾಮೇಶ್ವರನ ಕೆಲಸ ಮಾಡೋಣ ಎಂದು ಶಾಸಕರಾದ ಆರಗ ಜ್ಞಾನೇಂದ್ರ ಹೇಳಿದರು.
ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ನಡೆದ ಸಭೆಯಲ್ಲಿ ಕಳೆದ ಬಾರಿ ಇದ್ದಂತಹ ಸಮಿತಿಯೇ ಇರಲಿ ಎಂಬ ಮಾತು ಕೇಳಿ ಬಂತು. ಸಮಿತಿಯಲ್ಲಿ ಇರುವ ಪ್ರತಿಯೊಬ್ಬರು ದೇವಸ್ಥಾನದ ಈ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಬೇಕು. ಈ ಹಿಂದೆ ಕೆಲಸ ಮಾಡಿ 9 ಲಕ್ಷ ಹಣವನ್ನು ಉಳಿಸಿದ್ದೀರಾ ಎಂಬುದು ನಿಜಕ್ಕೂ ಪ್ರಶಂಸನೀಯ. ಹಾಗಾಗಿ ಈ ಬಾರಿ ಸಹ ಅತ್ಯಂತ ವೈಭವದಿಂದ ಜಾತ್ರೆಯನ್ನು ಆಚರಿಸೋಣ ಎಂದರು.
ಇತ್ತೀಚಿಗೆ ದೇವಸ್ಥಾನದಲ್ಲಿ ಕಾಲ್ತುಳಿತ ಪ್ರಕರಣ ಆಗುತ್ತಿದೆ. ಬೆಂಗಳೂರು ಹಾಗೂ ಶಬರಿಮಲೆಯಲ್ಲಿ ಈ ರೀತಿ ಪ್ರಕರಣ ಆಗಿದೆ. ಹಾಗಾಗಿ ಜನರ ಓಡಾಟಕ್ಕೆ ಹಾಗೂ ವಾಹನಗಳ ಪಾರ್ಕಿಂಗ್ ಬಗ್ಗೆ ಸರಿಯಾದ ವ್ಯವಸ್ಥೆ ಮಾಡಬೇಕು. ಇನ್ನು ತೀರ್ಥಸ್ನಾನದ ದಿನವೂ ಸಾವಿರಾರು ಜನ ಸೇರುವುದರಿಂದ ತುಂಬಾ ಜಾಗ್ರತೆ ವಹಿಸಬೇಕಿದೆ. ಇನ್ನು ಸಿಸಿಟಿವಿ ಕ್ಯಾಮರಾ ಅಳವಡಿಕೆ, ಪೊಲೀಸ್ ಬಂದೋಬಸ್ತ್ ಹಾಗೂ ಅಗ್ನಿಶಾಮಕದಳ ಸಹ ಮೂರು ದಿನಗಳು ಕಾರ್ಯ ನಿರ್ವಹಿಸಬೇಕು ಎಂದರು..
ರಥಬೀದಿಯಲ್ಲಿ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಹಾಕಬಾರದು, ಆಂಬುಲೆನ್ಸ್ ಓಡಾಡಲು ಅವಕಾಶ ಇರಲೇಬೇಕು. ಓರ್ವ ವ್ಯಕ್ತಿ ಭಿಕ್ಷುಕರನ್ನು ತಂದು ಬಿಡುವ ಬಗ್ಗೆ ಮಾಹಿತಿ ಇದೆ. ಈ ಬಾರಿ ಯಾವುದೇ ಭಿಕ್ಷುಕರನ್ನು ರಸ್ತೆ ಮೇಲೆ ಬಿಡಬಾರದು. ಹಾಗೇನಾದರೂ ಕಂಡು ಬಂದರೆ ಪೊಲೀಸರು ಅವರನ್ನು ತುಂಬಿಕೊಂಡು ಹೋಗಿ ಎಂದು ತಿಳಿಸಿದರು. ಇನ್ನು ಸಾಂಸ್ಕೃತಿಕ ಕಾರ್ಯಕ್ರಮ ಬದಲಾಗಿ ಪಟಾಕಿಗಾಗಿ ಹಣ ಜಾಸ್ತಿ ಇಡೋಣ ಜನರು ಬರುವುದೇ ಪಟಾಕಿ ನೋಡಲು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್ ಎಂ ಮಂಜುನಾಥ್ ಗೌಡ,, ತಹಸೀಲ್ದಾರ್ ರಂಜಿತ್, ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜಿ, ಇನ್ಸ್ಪೆಕ್ಟರ್ ಇಮ್ರಾನ್ ಬೇಗ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗರಾಜ್, ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ಸುಂದರೇಶ್, ನವೀನ್ ಹೆದ್ದೂರು, ಗೀತಾ ರಮೇಶ್ ಸೇರಿ ಹಲವರು ಉಪಸ್ಥಿತರಿದ್ದರು.
Tags:
ಜಾತ್ರಾ ಸುದ್ದಿ