ಪಟ್ಟಣ ಪಂಚಾಯತ್ ಅಧ್ಯಕ್ಷರ ಅರ್ಜಿ ವಜಾಗೊಳಿಸಿದ ನ್ಯಾಯಾಲಯ..! muncipal

ಪಟ್ಟಣ ಪಂಚಾಯತ್ ಅಧ್ಯಕ್ಷರ ಅರ್ಜಿ ವಜಾಗೊಳಿಸಿದ ನ್ಯಾಯಾಲಯ..!
ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನದ ಅವಿಶ್ವಾಸ ನಿರ್ಣಯ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ರಹಮತ್ ಉಲ್ಲಾ ಅಸಾದಿ ಅವರ ರಿಟ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಪಟ್ಟಣ ಪಂಚಾಯತಿ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯವನ್ನು ಎತ್ತಿ ಹಿಡಿದು ಅದರ ಪ್ರಕಾರ ಕ್ರಮ ಕೈಗೊಳ್ಳುವಂತೆ  ನ್ಯಾಯಾಲಯ ಆದೇಶ ನೀಡಿದೆ.

 ಎರಡು ತಿಂಗಳುಗಳ ಕಾಲ ಅವಕಾಶ ಬೇಕೆಂದು ಕಾಂಗ್ರೆಸ್ ಪಕ್ಷದ ನಾಯಕರ ಬಳಿ ರಹಮತುಲ್ಲಾ ಅಸಾದಿ ಕೇಳಿದ್ದರು.
ಆದರೆ ಉಳಿದ ಸದಸ್ಯರು ಅಸಾದಿ ವಿರುದ್ಧ ಅವಿಶ್ವಾಸ ನಿರ್ಣಯವನ್ನ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ್ದ ಅಸಾದಿ ಅವರಿಗೆ ತೀರ್ಪಿನ ಆದೇಶವನ್ನು ಬಾಕಿ ನೀಡಿ ಸದ್ಯದ ಮಟ್ಟಿಗೆ ರಿಲೀಫ್ ನೀಡಲಾಗಿತ್ತು.

 ಇನ್ನು ನ್ಯಾಯಾಲಯ ಈ ವಿಚಾರವನ್ನ ಕೈಗೆತ್ತಿಕೊಂಡು ಅಸಾದಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನ ವಜಾಗೊಳಿಸಿ 
 ಅವಿಶ್ವಾಸ ನಿರ್ಣಯವನ್ನು ಎತ್ತಿ ಹಿಡಿಯುವ ಮೂಲಕ ಅದರ ಪ್ರಕಾರವಾಗಿಯೇ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ.

 ಈ ಹಿನ್ನಲೆಯಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಹಮತ್ ಉಲ್ಲಾ ಅಸಾದಿ ಅವರು ಶೀಘ್ರದಲ್ಲೇ ರಾಜೀನಾಮೆಯನ್ನು ನೀಡಬೇಕಾಗಿದ್ದು ಆನಂತರದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯಲಿದೆ..
Previous Post Next Post