ಶಿವಮೊಗ್ಗದಲ್ಲಿ ಸಮುದ್ರ ಮಂಥನ ಮಹಾದ್ವಾರ..!
ಮೊದಲು ಸುದ್ದಿ ಬ್ರೇಕ್ ಮಾಡಿದ್ದೆ ಶಿವಮೊಗ್ಗ ಸುದ್ದಿ
ಶಿವಮೊಗ್ಗ : ಜಿಲ್ಲೆಯ ಅತ್ಯಂತ ವೈಭವದ, ವಿಜೃಂಭಣೆಯ ಗಣೇಶೋತ್ಸವದಲ್ಲಿ ಒಂದಾದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆಗೆ ಮೂರು ದಿನ ಬಾಕಿ ಇದ್ದು ಇಂದು ಹಿಂದೂ ಮಹಾಸಭಾ ಗಣಪತಿಯ ಮಹಾದ್ವಾರ ನಿರ್ಮಾಣ ಆಗಲಿದೆ.
ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದ್ದು ಕೆಲವೇ ಕ್ಷಣಗಳಲ್ಲಿ ಮಹಾದ್ವಾರ ನಿರ್ಮಿಸಲಾಗುತ್ತದೆ. ಈ ಬಾರಿ ಏನು? ಹೇಗಿರುತ್ತೆ? ಎಂಬೆಲ್ಲ ಪ್ರೆಶ್ನೆಗಳಿಗೆ ಶಿವಮೊಗ್ಗ ಸುದ್ದಿ ಕಳೆದ ಒಂದು ವಾರಕ್ಕೂ ಮೊದಲೇ ಸುದ್ದಿ ಮಾಡಿತ್ತು. ಯಾರಿಗೂ ತಿಳಿಯದ ಮಾಹಿತಿ ಶಿವಮೊಗ್ಗ ಸುದ್ದಿ ತಂಡಕ್ಕೆ ಸಿಕ್ಕಿತ್ತು. ಶಿವಮೊಗ್ಗ ಸುದ್ದಿ ತಂಡದ ವಿನಯ್ ಪುರದಾಳು ಅವರ ವರದಿಯಿಂದ ಸುದ್ದಿ ಬಿತ್ತರ ಮಾಡಲಾಗಿತ್ತು.ಈ ಬಾರಿ ಸಮುದ್ರ ಮಂಥನ ಕಥೆಯನ್ನು ಆಧರಿಸಿ ಮಹಾದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಕಲಾವಿದ ಜೀವನ್ ಅವರ ಕೈಚಳಕದಿಂದ ನಿರ್ಮಾಣಗೊಂಡ ಈ ದ್ವಾರ ಮಾಡಲಾಗಿದ್ದು ಇನ್ನೇನು ಕೆಲವೇ ಕ್ಷಣಗಳಲ್ಲಿ ಹಾಕಲಾಗುತ್ತದೆ.
ಇದನ್ನು ಓದಿ - ಈ ಬಾರಿ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ ಏನು..!?
ಇಂದು ಮಧ್ಯ ರಾತ್ರಿಯಿಂದ ಈ ದ್ವಾರ ನೋಡಲು ಎಲ್ಲರಿಗೂ ಸಿಗಲಿದೆ. ಈ ಬಾರಿ ದೇಶ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಘಟನೆ ಅಧರಿಸಿ ಈ ಕಥೆಯ ಸನ್ನಿವೇಶ ಮಾಡಲಾಗಿದೆ. ಒಟ್ಟಿನಲ್ಲಿ ಶಿವಮೊಗ್ಗ ಸುದ್ದಿ ವರದಿ ಕೊನೆಗೂ ಸತ್ಯವಾಗಿದೆ..