ಈ ಬಾರಿ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ ಏನು..!? Hindu mahasabha Dwara

ಈ ಬಾರಿ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಮಹಾದ್ವಾರ ಏನು..!?

ಕುತೂಹಲ ಮೂಡಿಸಿರುವ ದ್ವಾರ ಯಾವುದು..!?

ಶಿವಮೊಗ್ಗ : ಪ್ರತಿಯೊಂದು ಬಾರಿ ಕುತೂಹಲ ಮೂಡಿಸುವುದು ಹಿಂದೂ ಮಹಾಸಭಾ ಗಣಪತಿಯ ಮಹಾದ್ವಾರ,  ಏನೆಲ್ಲಾ ಇರುತ್ತೆ!? ಯಾವೆಲ್ಲ ವಿಶೇಷತೆ ಇರುತ್ತೆ ಅಂತ ಕುತೂಹಲ ಇರುವುದು ಸಹಜ. ಆದರೆ ದ್ವಾರದ ಬಗ್ಗೆ ಎಲ್ಲಿಯೂ ಒಂದೇ ಒಂದು ಸುಳಿವು ಬಿಟ್ಟು ಕೊಡದೇ ಕೊನೆ ಕ್ಷಣದವರೆಗೂ ಕಾಯುವಂತೆ ಮಾಡಲಾಗುತ್ತದೆ. ಮಾಧ್ಯಮ ತಂಡ ಭೇಟಿ ಕೊಟ್ಟರು ಅವರಿಗೂ ಸಹ ಬಿಡಲಾಗುವುದಿಲ್ಲ. ನೀವು ಕಾಯಿರಿ ಎಂಬ ಮಾತುಗಳು ಬರುತ್ತದೆ. ಹಾಗಾಗಿ ಈ ಬಾರಿ ಕುತೂಹಲ ಇದೆ.

ಆಪರೇಷನ್ ಸಿಂಧೂರ - ಧರ್ಮಸ್ಥಳ ಮಹಾದ್ವಾರದ ಬಗ್ಗೆ ಕುತೂಹಲ..!

ಈ ಬಾರಿ ಪಹಲ್ಗಾಮ್ ನಲ್ಲಿ ನಡೆದ ಘಟನೆ ನಂತರ ನಡೆದ ಆಪರೇಷನ್ ಸಿಂಧೂರ ಎಲ್ಲೆಡೆ ಚರ್ಚೆ ಆಗಿತ್ತು ಹಾಗಾಗಿ ಈ ಬಾರಿ ಆ ದ್ವಾರ ನಿರ್ಮಾಣ ಆಗುತ್ತಾ? ಅಥವಾ ಧರ್ಮಸ್ಥಳ ವಿಚಾರವಾಗಿ ನಡೆದ ಘಟನೆಯಿಂದ ಹಿಂದೂಗಳು ಈಗಾಗಲೇ ಧರ್ಮಸ್ಥಳ ಪರವಾಗಿ ಮಾಡಿದ ಪ್ರತಿಭಟನೆ ವಿಚಾರದಿಂದ ಧರ್ಮಸ್ಥಳ ಮಹಾದ್ವಾರ ಮಾಡಬಹುದಾ? ಎಂಬ ಚರ್ಚೆಗಳು ನಡೆಯುತ್ತಿದೆ. ಆದರೆ ದ್ವಾರದ ಬಗ್ಗೆ ಸಣ್ಣ ಸುಳಿವೊಂದು ಸಿಕ್ಕಿದ್ದು ನಿಜವೇ? ಸುಳ್ಳೇ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಸಮುದ್ರ ಮಂಥನ..!?

ಹೌದು ಶಿವಮೊಗ್ಗ ಸುದ್ದಿ ತಂಡಕ್ಕೆ ಮೂಲಗಳ ಪ್ರಕಾರ ಸಣ್ಣದೊಂದು ಮಾಹಿತಿ ಸಿಕ್ಕಿದ್ದು ಈ ಬಾರಿ ಹಲವು ಘಟನೆಗಳ ಆಧಾರದ ಮೇಲೆ ಅಮೃತವನ್ನು ಪಡೆಯಲು ದೇವತೆಗಳು ಹಾಗೂ ರಾಕ್ಷಸರು ನಡೆಸಿದ ಸಮುದ್ರ ಮಂಥನದ ಕಥೆಯನ್ನು ಸಾರುವ ದ್ವಾರ ನಿರ್ಮಾಣ ಆಗಲಿದೆ ಎಂಬ ಮಾಹಿತಿ ಸಿಕ್ಕಿದ್ದು ಅದು ನಿಜವೇ ಎಂಬುದಕ್ಕೆ ಇನ್ನು ಒಂದು ವಾರ ಕಾಯಬೇಕಿದೆ..


ಈ ಬಾರಿ ಸಮುದ್ರ ಮಂಥನದ ಕಥೆ ಏಕೆ..!?

ಹೌದು ಅಷ್ಟಕ್ಕೂ ಸಮುದ್ರ ಮಂಥನದ ಕಥೆ ಏಕೆ..!? ಎಂಬ ಸಣ್ಣ ಪ್ರೆಶ್ನೆ ಎಲ್ಲರಲ್ಲೂ ಬರುವುದು ಸಹಜ.. ಸಮುದ್ರ ಮಂಥನವು ಹಿಂದೂ ಪುರಾಣಗಳಲ್ಲಿನ ಒಂದು ಪ್ರಮುಖ ಘಟನೆಯಾಗಿದೆ. ಆದರೆ ಅದನ್ನು ಮಹಾದ್ವಾರದಲ್ಲಿ ನಿರ್ಮಾಣ ಮಾಡಲು ಕಾರಣ ಏನು? ಎಂಬ ಪ್ರೆಶ್ನೆಗೆ ಶಿವಮೊಗ್ಗ ಸುದ್ದಿ ತಂಡಕ್ಕೆ ಸಣ್ಣ ವಿಷಯವೂ ತಿಳಿದಿದೆ.
ಶಿವಮೊಗ್ಗ ಮಹಾದ್ವಾರದ ಸಮುದ್ರ ಮಂಥನ ಕಥೆಗೂ ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ಘಟನೆಗೂ ಸಂಬಂಧ ಇದೆ ಎಂಬುದಾಗಿ ಮೂಲಗಳ ಪ್ರಕಾರ ಮಾಹಿತಿ ದೊರಕಿದೆ.

ಅಮರತ್ವವನ್ನು ಪಡೆಯಲು ದೇವತೆಗಳು ಹಾಗೂ ರಾಕ್ಷಸರ ನಡುವೆ ಹಾಲುಸಾಗರವನ್ನು ಕಡೆದರು ಆಗ ಮೊದಲಿಗೆ ಅತ್ಯಂತ ಉಗ್ರವಾದ ಹಾಲಾಹಲ ವಿಷ ಹೊರಬಂತು, ಇದು ಸೃಷ್ಟಿಯನ್ನು ನಾಶಮಾಡಬಲ್ಲ ಸಾಮರ್ಥ್ಯ ಹೊಂದಿತ್ತು. 
ಈ ವಿಕೋಪವನ್ನು ತಡೆಯಲು, ದೇವತೆಗಳು ಭಗವಾನ್ ಶಿವನನ್ನು ಪ್ರಾರ್ಥಿಸಿದರು. ಶಿವನು ಹಾಲಾಹಲವನ್ನು ಸೇವಿಸಿ ತನ್ನ ಗಂಟಲಿನಲ್ಲಿ ಹಿಡಿದನು, ಇದರಿಂದ ಅವನ ಗಂಟಲು ನೀಲಿಯಾಯಿತು ಮತ್ತು ಅವನನ್ನು "ನೀಲಕಂಠ" ಎಂದು ಕರೆಯಲಾಯಿತು. ಮಂಥನ ಮುಂದುವರೆದಾಗ, ಧನ್ವಂತರಿ ದೇವನು ಅಮೃತದ ಮಡಕೆಯೊಂದಿಗೆ ಹೊರಹೊಮ್ಮಿದನು.
ಮೋಹಿನಿ ರೂಪದಲ್ಲಿದ್ದ ವಿಷ್ಣುವು, ದೇವತೆಗಳಿಗೆ ಮಾತ್ರ ಅಮೃತವನ್ನು ವಿತರಿಸಿದನು, ಇದರಿಂದ ಅವರು ಅಮರರಾದರು ಎಂಬ ಕಥೆ ಕೇಳಿದ್ದೇವೆ. ಈಗ ಈ ಕಥೆಯನ್ನು ಅಧರಿಸಿ ಮಹಾದ್ವಾರ ಮಾಡಲಾಗುತ್ತಿದೆ.

ಈ ಬಾರಿ ಹಿಂದೂ ಮಹಾಸಭಾ ಗಣಪತಿಯ ಮಹಾದ್ವಾರ
ಸಮುದ್ರ ಮಂಥನ ಕಥೆಯ ಆಧಾರಿತ ಎನ್ನಲಾಗುತ್ತಿದ್ದು
ಸ್ಪಷ್ಟ ಚಿತ್ರಣ ನೋಡಲು ಇನ್ನೊಂದು ವಾರ ಕಾಯಬೇಕಿದೆ..
Previous Post Next Post