ನಾಳೆ ತೀರ್ಥಹಳ್ಳಿಯಲ್ಲಿ ಎರಡು ಗಣಪತಿಗಳ ಅತಿ ದೊಡ್ಡ ಶೋಭಾಯಾತ್ರೆ
ಸೈಲೆಂಟ್ ಗಣಪ ಒಂದೆಡೆ, ಡ್ಯಾನ್ಸ್ ಮೂಲಕವೇ ಖ್ಯಾತಿ ಪಡೆದ ಗಣಪ ಇನ್ನೊಂದೆಡೆ
ಸಹಸ್ರಾರು ಸಂಖ್ಯೆಯಲ್ಲಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಲು ಮನವಿ
ತೀರ್ಥಹಳ್ಳಿ : ತೀರ್ಥಹಳ್ಳಿಯ ಎರಡು ಗಣಪತಿಗಳ ಅತಿ ದೊಡ್ಡ ಶೋಭಾಯಾತ್ರೆ ನಾಳೆ ನಡೆಯಲಿದ್ದು ಗಣಪತಿ ವಿಸರ್ಜನಾ ಮೆರವಣಿಗೆಗೆ ಎಲ್ಲಾ ತಯಾರಾಗಿದೆ.
ತೀರ್ಥಹಳ್ಳಿ ಪಟ್ಟಣದ ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘ ಹಾಗೂ ಮೇಲಿನಕುರವಳ್ಳಿಯ ಶ್ರೀ ವಿದ್ಯಾಗಣಪತಿ ಸೇವಾ ಸಂಘ ಇವರು ಪ್ರತಿಷ್ಠಾಪಿಸಿದ್ದ ಎರಡು ಗಣಪತಿಗಳ ವಿಸರ್ಜನಾ ಮೆರವಣಿಗೆಯ ಅತಿ ದೊಡ್ಡ ಶೋಭಾಯಾತ್ರೆ ನಾಳೆ ಮಧ್ಯಾಹ್ನ 3:00 ಗಂಟೆಗೆ ಆರಂಭವಾಗಲಿದೆ.
ಛತ್ರಕೇರಿಯ ಶ್ರೀ ಸಿದ್ಧಿ ವಿನಾಯಕ ಯುವಕ ಸಂಘದ ಮೆರವಣಿಗೆಯು ಚಂಡೆ, ನಾಸಿಕ್ ಬ್ಯಾಂಡ್, ವಿವಿಧ ವೇಷಭೂಷಣಗಳ ಜೊತೆಗೆ ವಿಸರ್ಜನಾ ಮೆರವಣಿಗೆ ಆರಂಭವಾಗಿ ಆಗುಂಬೆ ಬಸ್ ನಿಲ್ದಾಣ, ಸೀಬಿನಕೆರೆ ಸರ್ಕಲ್, ಮಸೀದಿ ರಸ್ತೆ, ಗಾಂಧಿಚೌಕ, ಕೊಪ್ಪ ಸರ್ಕಲ್, ಕುಶಾವತಿ, ಕೆ ಸಿ ರಸ್ತೆ, ಮಿಲ್ಕೆರಿ ರಸ್ತೆ, ಛತ್ರಕೇರಿ ಹಾಗೂ ರಥಬೀದೀಯ ಮೂಲಕ ತುಂಗಾ ನದಿಯಲ್ಲಿ ವಿಸರ್ಜನೆ ನಡೆಯಲಿದೆ.
ಡ್ಯಾನ್ಸ್ ಮೂಲಕವೇ ಪ್ರಸಿದ್ದಿ ಪಡೆದ ಯುವಕ ಸಂಘ..!
ಇನ್ನು ಗಣಪತಿ ವಿಸರ್ಜನೆ ವೇಳೆ ಅದ್ಬುತ ಡ್ಯಾನ್ಸ್ ಮೂಲಕವೇ ಪ್ರಖ್ಯಾತಿ ಪಡೆದ ಮೇಲಿನಕುರುವಳ್ಳಿಯ ವಿದ್ಯಾ ಗಣಪತಿಯ ನಿಸರ್ಜನಾ ಮೆರವಣಿಗೆ ನಾಳೆ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದ್ದು ಮೆರವಣಿಗೆಯಲ್ಲಿ ಡಿಜೆ, ನಾಸಿಕ್ ಬ್ಯಾಂಡ್, ಅಘೋರಿಗಳ ತಂಡ, ಸೇರಿ ವಿವಿಧ ವೇಷ ಭೂಷಣ ಒಳಗೊಂಡ ಮೆರವಣಿಗೆ ಕುರುವಳ್ಳಿ, ರಥಬೀದಿ, ಛತ್ರಕೇರಿ, ಗಾಂಧಿಚೌಕ, ಆಗುಂಬೆ ಬಸ್ ನಿಲ್ದಾಣ,, ಸೀಬಿನಕೆರೆ ಸರ್ಕಲ್, ಮಸೀದಿ ರಸ್ತೆ, ಕೊಪ್ಪ ಸರ್ಕಲ್ ಮೂಲಕ ಪುನಃ ಮೇಲಿನಕುರುವಳ್ಳಿಯ ಹೆನ್ನಂಗಿ ಹಳ್ಳದಲ್ಲಿ ವಿದ್ಯಾಗಣಪತಿಯ ವಿಸರ್ಜನೆ ನಡೆಯಲಿದೆ.
ಈ ಎರಡು ಗಣಪತಿಗಳ ಅತೀ ದೊಡ್ಡ ಶೋಭಾಯಾತ್ರೆಯಲ್ಲಿ ಸಾವಿರಾರು ಜನರು ಸೇರುವ ಮೂಲಕ ಗಣಪತಿ ವಿಸರ್ಜನೆ ನಡೆಸಿಕೊಡಲು ಸಮಿತಿ ಅಧ್ಯಕ್ಷರು, ಸದಸ್ಯರು ಮನವಿ ಮಾಡಿದ್ದಾರೆ..
Tags:
ಗಣೇಶೋತ್ಸವ