ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ಗೌರಿ ಹಬ್ಬದ ಪ್ರಯುಕ್ತ ಬಾಗಿನ ವಿತರಣೆ
ಶಿವಮೊಗ್ಗ : ಗೌರಿ ಹಬ್ಬದ ಅಂಗವಾಗಿ ಸುಮಾರು ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ಶಿವಮೊಗ್ಗದಲ್ಲಿ ಬಾಗಿನ ವಿತರಣೆ ಮಾಡಲಾಯಿತು.
ಶಿವಮೊಗ್ಗ ನಗರದ ವೆಂಕಟಾಪುರ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿ ನಂತರ ಮಹಿಳೆಯರಿಗೆ ಬಾಗಿನ ವಿತರಣೆ ಮಾಡಲಾಯಿತು.
ಮುಜರಾಯಿ ಇಲಾಖೆಯ ನಿರ್ದೇಶಕರಾದ ವರಲಕ್ಷ್ಮಿ ಅವರು ಮಹಿಳೆಯರಿಗೆ ಬಾಗಿನ ವಿತರಿಸಿದರು. ಈ ವೇಳೆ ಮಾತನಾಡಿ ಮಹಿಳೆಯರಿಗೆ ಬಾಗಿನ ವಿತರಣೆ ಮಾಡುವುದು ಒಂದು ಪುಣ್ಯದ ಕೆಲಸ. ನಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿದಾಗ ಯಾರಾದರೂ ಒಬ್ಬರಿಗೆ ಬಾಗಿನ ಕೊಡುತ್ತೇವೆ. ಆದರೆ ಇಲ್ಲಿ ಗೌರಿಯನ್ನು ಪೂಜಿಸಿ ಎಲ್ಲರಿಗೂ ಬಾಗಿನ ಕೊಡುತ್ತಿರುವುದು ಬಹಳ ಸಂತೋಷ ನೀಡಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
Tags:
ಶಿವಮೊಗ್ಗ ಸುದ್ದಿ