ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ನಂಬರ್ 1 ಸ್ಥಾನ ಪಡೆದೇ ಬಿಟ್ರಾ ಮೇಲಿನಕುರುವಳ್ಳಿ ಯುವಕ ಸಂಘ..!? Ganeshotsava

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ನಂಬರ್ 1 ಸ್ಥಾನ ಪಡೆದೇ ಬಿಟ್ರಾ ಮೇಲಿನಕುರುವಳ್ಳಿ ಯುವಕ ಸಂಘ..!?

ತೀರ್ಥಹಳ್ಳಿ : ಗಣಪತಿ ಹಬ್ಬ ಎಂದರೆ ಅದೇನೋ ಸಂಭ್ರಮ ಸಡಗರ, ಗಣಪತಿ ತರುವಾಗ ಇರುವ ಸಂಭ್ರಮ ಒಂದೆಡೆ ಆದರೆ ಗಣಪತಿ ವಿಸರ್ಜನೆ ವೇಳೆ ಇರುವ ಸಂಭ್ರಮ ಬೇರೆಯದ್ದೆ ಆಗಿರುತ್ತದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಸರಿ ಸುಮಾರು 400 ಕ್ಕೂ ಹೆಚ್ಚು ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪಟ್ಟಣದ ಒಳಗೆ ಸುಮಾರು 30 ಕ್ಕೂ ಹೆಚ್ಚು ಗಣಪತಿ ಪ್ರತಿಷ್ಠಾಪನೆ ಮಾಡಿ ಮೆರವಣಿಗೆ ಮಾಡಲಾಗುತ್ತದೆ. ಆದರೆ ಎಲ್ಲಾ ಗಣಪತಿ ಮೆರವಣಿಗೆಯನ್ನು ಮೀರಿಸಿ ಜನರು ಸೇರಿ ನಂಬರ್ 1 ಸ್ಥಾನ ಪಡೆದಿದ್ದು ಮೇಲಿನಕುರುವಳ್ಳಿ ಶ್ರೀ ವಿದ್ಯಾಗಣಪತಿ ಯುವಕ ಸಂಘ ಎಂದರೆ ತಪ್ಪಾಗಲ್ಲ.

ಈ ಬಾರಿ ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ 11 ದಿನಗಳ ಪರ್ಯಂತ ನಡೆದ ಅದ್ದೂರಿ ಗಣೇಶೋತ್ಸವ ನಡೆದು ವಿಸರ್ಜನೆ ಸಹ ಅತ್ಯಂತ ವೈಭವದಿಂದ ನೆಡೆದಿದೆ. ವಿಸರ್ಜನೆ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ  ಎಂಬುದಾಗಿ ಶಿವಮೊಗ್ಗ ಸುದ್ದಿ ವರದಿ ಮಾಡಿತ್ತು. ಆದರೆ ಅದಕ್ಕೂ ಮೀರಿ ಯುವಕ ಯುವತಿಯರು ಗ್ರಾಮದ ಸಾರ್ವಜನಿಕರು ಸೇರುವ ಮೂಲಕ ವಿಸರ್ಜನೆ ಮೆರವಣಿಗೆಯಲ್ಲಿ ಅತೀ ಹೆಚ್ಚು ಜನ ಸೇರಿದ ನಂಬರ್ 1 ಗಣಪತಿ ಸಂಘ ಎಂದು ತಿಳಿಸಿದರು.

ಕಳೆದ ಮೂರು ವರ್ಷದಿಂದ ಡ್ಯಾನ್ಸ್ ಮೂಲಕ ಪ್ರಸಿದ್ದಿ ಪಡೆದ ಶ್ರೀ ವಿದ್ಯಾಗಣಪತಿ ಯುವಕ ಸಂಘದ ಸದಸ್ಯರು
ಬರಿ ಡ್ಯಾನ್ಸ್ ಮಾಡುವುದರಲ್ಲಿ ಮಾತ್ರ ನಾವು ನಂಬರ್ 1 ಅಲ್ಲ, ಅತೀ ಹೆಚ್ಚು ಜನ ಸೇರಿ ಮೆರವಣಿಗೆ ಮಾಡುವುದರಲ್ಲೂ ನಾವೇ ನಂಬರ್ 1 ಎಂದು ತೋರಿಸಿಕೊಟ್ಟರು. ಯುವ ಮುಖಂಡರಾದ ಪೂರ್ಣೇಶ್ ಪೂಜಾರಿ ಹಾಗೂ ಅಣ್ಣಪ್ಪ ಪೂಜಾರಿ ನೇತೃತ್ವದ ಯುವಕರ ತಂಡ ಈ ಬಾರಿ ಅತೀ ದೊಡ್ಡ ವಿಸರ್ಜನಾ ಮೆರವಣಿಗೆ ಮಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆದರು.

ಇನ್ನು ಡ್ಯಾನ್ಸ್ ಮಾತ್ರವಲ್ಲದೆ ಈ ಬಾರಿ ಅಘೋರಿಗಳ ತಂಡ, ನಾಸಿಕ್ ಬ್ಯಾಂಡ್, ಚಂಡೆ, ಯುವತಿಯರ ಡ್ಯಾನ್ಸ್, ಹಾಗೂ ಇದೆಲ್ಲದಕ್ಕಿಂತ ಹೆಚ್ಚಾಗಿ ವಾಹನದಲ್ಲಿ ಗಣಪತಿ ಹಿಂಭಾಗ ಇದ್ದಂತಹ ಈಶ್ವರ ಹಾಗೂ ನಂದಿ ಎಲ್ಲರ ಕಣ್ಮನ ಸೆಳೆಯಿತು.
ಕಳೆದ ಕೆಲವು ವರ್ಷಗಳಿಂದ ಮೇಲಿನಕುರುವಳ್ಳಿ ಯುವಕ ಸಂಘದವರು ವಿಶೇಷ ರೀತಿಯಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಜೃಂಭಣೆಯಿಂದ ಆಚರಿಸುವುದಾಗಿ ತಿಳಿಸಿದ್ದಾರೆ. 
ಈ ಬಾರಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ ಈ ಬಾರಿ ಸಿಕ್ಕಿರುವ ಅಭೂತ ಪೂರ್ವ ಬೆಂಬಲದೊಂದಿಗೆ
ಮುಂದಿನ ಬಾರಿ ಮತ್ತಷ್ಟು ಹುಮ್ಮಸ್ಸಿನಿಂದ ಬರುವುದಾಗಿ ಯುವಕ ಸಂಘದವರು ತಿಳಿಸಿದ್ದಾರೆ.

ವಿಶೇಷ ವರದಿ - ಅಕ್ಷಯ್ ಕುಮಾರ್ 
Previous Post Next Post