ನಾಳೆ ಶಾಲಾ ಕಾಲೇಜುಗಳ ರಜೆ ಬಗ್ಗೆ ತಹಸೀಲ್ದಾರ್ ಹೇಳಿದ್ದೇನು..!? tth

ನಾಳೆ ಶಾಲಾ ಕಾಲೇಜುಗಳ ರಜೆ  ಬಗ್ಗೆ ತಹಸೀಲ್ದಾರ್ ಹೇಳಿದ್ದೇನು..!? 

ತೀರ್ಥಹಳ್ಳಿ : ಮಘೆ ಮಳೆಯ ಅಬ್ಬರದಿಂದ ನದಿ ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ 18/8/25 ರ ಸೋಮವಾರ ( ಇಂದು) ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದನ್ನು  ದುರುಪಯೋಗ ಮಾಡಿಕೊಂಡ ಕೆಲವು ಕಿಡಿಗೇಡಿಗಳು ನಾಳೆ (19 ರಂದು) ರಜೆ ಇದೆ! ಎಂಬ ಆದೇಶ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.


ಈ ವಿಚಾರವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಮಾನ್ಯ ತಾಲೂಕು ದಂಡಾಧಿಕಾರಿಗಳಾದ ರಂಜಿತ್ ರವರು  ನಾಳೆ (19-08-2025) ಯಾವುದೇ ರಜೆಯನ್ನು ಘೋಷಿಸಲಾಗಿಲ್ಲ. ಈ ತಪ್ಪು, ಕಲ್ಪಿತ ಮತ್ತು ತಪ್ಪಾಗಿ ನಿರ್ಮಿಸಲಾದ ಸಂದೇಶವು ವಿವಿಧ ಗುಂಪುಗಳಲ್ಲಿ ಹರಡುತ್ತಿದೆ. ಮತ್ತು ಅಂತಹ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ..

ಆದ್ದರಿಂದ, ನಾಳೆ (19-08-2025) ರಜಾದಿನ ಇರುವುದಿಲ್ಲ. ಎಂದಿನಂತೆ ಅಂಗನವಾಡಿ, ಶಾಲೆ, ಕಾಲೇಜುಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

Previous Post Next Post