ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ..! Rameshvara Temple

ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಆಯ್ಕೆ..!

ತೀರ್ಥಹಳ್ಳಿ : ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ನಾಲ್ಕು ವರ್ಷ ಖಾಲಿ ಇತ್ತು. ಈ ಅವಧಿಯಲ್ಲಿ ಒಟ್ಟು ಒಂಭತ್ತು ಜನರನ್ನು ವ್ಯವಸ್ಥಾಪನ ಸಮಿತಿಯಲ್ಲಿ ಸದಸ್ಯರು ಇದ್ದೇವೆ. ಎಲ್ಲರ ತೀರ್ಮಾನದಂತೆ ಇಂದು ನನ್ನನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಲ್ಲರಿಗೂ ನಾನು ಕೃತಜ್ಞತೆ ಹೇಳುತ್ತೇನೆ ಎಂದು ವಿಶ್ವನಾಥ್ ಶೆಟ್ಟಿ ಹೇಳಿದರು.

ಸೋಮವಾರ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ  ದೇವಸ್ಥಾನದಲ್ಲಿ ಅನೇಕ ಅಭಿವೃದ್ಧಿ ಕೆಲಸ ಆಗಬೇಕಿದೆ. ಈಗ ನಿತ್ಯ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದೆ. ಸಮಿತಿ ಆಗುವವರೆಗೆ ಸಣ್ಣ ಪುಟ್ಟ ಸಮಸ್ಯೆ ಇತ್ತು. ಇನ್ನು ಹಾಗಿರಲ್ಲ, ದೇವಸ್ಥಾನದ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸುತ್ತೇವೆ. ಇಂದಿನಿಂದ ಈ ಸಮಿತಿ ಪೂರ್ಣ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲಿದೆ ಎಂದರು.

ಉಳಿದಂತೆ ಕೆಲವು ಸಮಿತಿಗಳು ಇದ್ದಾವೆ. ಅದೆಲ್ಲವೂ ನಮ್ಮ ಸಮಿತಿ ಕೆಳಗಡೆ ಕೆಲಸ ನಿರ್ವಹಿಸುತ್ತದೆ. ದೇವಸ್ಥಾನದ ಅರ್ಚಕರು, ತಂತ್ರಿಗಳು, ಹೀಗೆ ದೇವಸ್ಥಾನದ ಅಭಿವೃದ್ಧಿಗಾಗಿ ನಮ್ಮ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು..

ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ನಿರ್ದೇಶಕರಾದ ವರಲಕ್ಷ್ಮಿ, ನಾಗಭೂಷಣ್, ರಾಮೇಶ್ವರ ದೇವಸ್ಥಾನದ ಅರ್ಚಕರಾದ ರಾಜಶೇಖರ್ ಭಟ್, ಮಹಾಬಲರಾವ್, ತ್ರಿವೇಣಿ ಸುರೇಶ, ಜ್ಯೋತಿ, ಹಾಲಿಗೆ ನಾಗರಾಜ್, ಪೂರ್ಣೇಶ್, ಪ್ರದೀಪ್ ಸೇರಿ ಹಲವರು ಇದ್ದರು.


Previous Post Next Post