ಹಣಗೆರೆ ಬಳಿ ಭೀಕರ ಅಪಘಾತ | ಕಳಚಿಕೊಂಡು ಬಸ್ ಹಿಂಬದಿ ಟೈರ್'ಗಳು | ತಪ್ಪಿದ ಭಾರೀ ಅನಾಹುತbus

ಹಣಗೆರೆ ಬಳಿ ಭೀಕರ ಅಪಘಾತ | ಕಳಚಿಕೊಂಡು ಬಸ್ ಹಿಂಬದಿ ಟೈರ್'ಗಳು | ತಪ್ಪಿದ ಭಾರೀ ಅನಾಹುತ

ತೀರ್ಥಹಳ್ಳಿ: ಶಿವಮೊಗ್ಗದಿಂದ ಹಣಗೆರೆಕಟ್ಟೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್'ವೊಂದಕ್ಕೆ ಕಾರೊಂದು ವೇಗವಾಗಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್'ನ ಹಿಂಬದಿಯ ಎಲ್ಲ ಟೈರ್'ಗಳು ಕಳಚಿಕೊಂಡು ಅಪಘಾತ ಸಂಭವಿಸಿದೆ.

ಡಿಕ್ಕಿಯಾದ ರಭಸಕ್ಕೆ ಬಸ್ ಹಿಂಬದಿಯ ಎಲ್ಲ ಟೈರ್'ಗಳು ಕಳಚಿಕೊಂಡು ಬಸ್'ನ ಹಿಂಭಾಗ ಸಂಪೂರ್ಣ ನೆಲಕ್ಕೆ ಕುಸಿದಿದೆ. ಆದರೆ ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗದೇ ಪಾರಾಗಿದ್ದಾರೆ.

ಡಿಕ್ಕಿ ಹೊಡೆದ ಪರಿಣಾಮ, ಬಸ್ ಹಿಂಬದಿ ನಾಲ್ಕು ಟೈರ್'ಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಕಾರಿನ ಮುಂಭಾಗ ತೀವ್ರವಾಗಿ ಜಖಂಗೊಂಡಿದ್ದರೂ, ಗಂಭೀರ ಗಾಯವಾದ ಬಗ್ಗೆ ವರದಿಯಾಗಿಲ್ಲ.

ಘಟನೆ ವೇಳೆ ಬಸ್'ನಲ್ಲಿ ಅನೇಕ ಪ್ರಯಾಣಿಕರಿದ್ದು, ಅವರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ. ಸ್ವಲ್ಪದರಲ್ಲಿ ದೊಡ್ಡ ದುರಂತವೊAದು ತಪ್ಪಿದಂತಾಗಿದೆ.
Previous Post Next Post