ಗಣಪತಿ ವಿಸರ್ಜನೆಗೆ ಹೋಗಿದ್ದ ಯುವಕ ಆನೆ ಟ್ರಂಚ್ ನಲ್ಲಿ ಶ*ವವಾಗಿ ಪತ್ತೆ!
ಶಿವಮೊಗ್ಗ : ಗಣಪತಿ ವಿಸರ್ಜನೆಗೆ ಹೋಗಿದ್ದ ಯುವಕ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸಿರಿಗೆರೆ ಅಂಚೆಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆ.
ಗಣಪತಿ ಪ್ರತಿಷ್ಠಾಪನೆ ಮಾಡಿ ಮೂರು ದಿನದ ಹಿನ್ನಲೆಯಲ್ಲಿ ನಿನ್ನೆ ವಿಸರ್ಜನೆ ಮಾಡಲಾಗಿದೆ. ಈ ವೇಳೆ ಟ್ರಂಚ್ ಗೆ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಟ್ರಂಚ್ ನಲ್ಲಿ ನೀರು ತುಂಬಿದ ಹಿನ್ನೆಲೆಯಲ್ಲಿ ಅಲ್ಲೇ ಯುವಕ ಪ್ರಾಣ ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ನಾಗರಾಜ್ (34) ಸಾವನ್ನಪ್ಪಿದ ಯುವಕ.
ಆನೆ ಟ್ರಂಚ್ ನಲ್ಲಿ ಮಳೆಯ ನೀರು ಸಂಗ್ರಹವಾದ ಕಾರಣ ಆತ ಪತ್ತೆಯಾಗಿರಲಿಲ್ಲ. ಇಂದು ಟ್ರಂಚ್ ನ ದಂಡೆ ಹೊಡೆದು ನೀರು ಖಾಲಿ ಮಾಡಿದಾಗ ನೀರಿನಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಆನೆ ಟ್ರಂಚ್ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಯಾವುದೇ ಪ್ರಯೋಜನವಾಗರಲಿಲ್ಲ. ಗ್ರಾಮ ಪಂಚಾಯಿತಿಗೂ ಮನವಿ ನೀಡಿದರು ಮನವಿಗೆ ಯಾವ ಅಧಿಕಾರಿಗಳು ಸ್ಪಂಧಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
Tags:
ಶಿವಮೊಗ್ಗ ಸುದ್ದಿ