ಶಿವಮೊಗ್ಗದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ.! Shivamogga

ಶಿವಮೊಗ್ಗದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ..!

ಶಿವಮೊಗ್ಗ:  ಕಳೆದ ಎರಡು ದಿನದ ಹಿಂದೆ 9ನೇ ತರಗತಿಯ ವಿದ್ಯಾರ್ಥಿನಿ  ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇದಕ್ಕೂ ಮೊದಲು ಇಂತಹದೇ ಪ್ರಕರಣ ಯಾದಗಿರಿ ಜಿಲ್ಲೆಯಲ್ಲಿ ನಡೆದಿತ್ತು.

ಶಿವಮೊಗ್ಗದಲ್ಲಿ 15 ವರ್ಷದ ಬಾಲಕಿಯೊಬ್ಬಳು ಈಚೆಗೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಕಳೆದ ಎರಡು ದಿನದ ಹಿಂದೆ ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. 7 ತಿಂಗಳ ಗಂಡು ಶಿಶು 1.8 ಕೆ.ಜಿ ತೂಕವಿದೆ. ಕೂಡಲೆ ಮಗು ಮತ್ತು ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದ್ದಾರೆ.

ಓದುಗರ ಗಮನಕ್ಕೆ: ಅಪ್ರಾಪ್ತೆಯ ಪ್ರಕರಣವಾದ ಕಾರಣದಿಂದಾಗಿ ಆಕೆಯ ಹೆಸರು, ವಿಳಾಸ ಮತ್ತು ಯಾವುದೇ ರೀತಿ ಗುರುತು ಪತ್ತೆಯಾಗುವಂತಹ ವಿಷಯ ಪ್ರಕಟಿಸುವಂತಿಲ್ಲ. 
Previous Post Next Post