ಕರಡಿ ದಾಳಿ - ವ್ಯಕ್ತಿಗೆ ಗಾಯ..! Bear attack

ಕರಡಿ ದಾಳಿ - ವ್ಯಕ್ತಿಗೆ ಗಾಯ..!

ಭದ್ರಾವತಿ :  ತೋಟಕ್ಕೆ ನಡೆದುಕೊಂಡು ಹೋಗುವಾಗ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ಭದ್ರಾವತಿ ತಾಲೂಕು ಮಾವಿನಕೆರೆಯಲ್ಲಿ ನಡೆದಿದೆ. 

ಮಧುಸೂದನ್ (38) ಕರಡಿ ದಾಳಿಗೆ ಒಳಗಾದವರು, ಭದ್ರಾವತಿಯ ಮಾವಿನಕೆರೆ ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.  ತೋಟಕ್ಕೆ ನಡೆದುಕೊಂಡು ಹೋಗುವಾಗ  ಕರಡಿಯೊಂದು ದಾಳಿ ನಡೆಸಿದೆ. ತಕ್ಷಣವೇ ಆತನನ್ನು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 



Previous Post Next Post