ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ- ಪ್ರಯಾಣಿಕರಿಗೆ ಗಾಯ Shikaripura

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ- ಪ್ರಯಾಣಿಕರಿಗೆ ಗಾಯ
ಶಿಕಾರಿಪುರ:  ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ವೊಂದು ಪಲ್ಟಿ ಹೊಡೆದ ಘಟನೆ ಹೊನ್ನಾಳಿ ರಸ್ತೆಯಲ್ಲಿ ನಡೆದಿದೆ.

ಶಿಕಾರಿಪುರದ ಸದಾಶಿವಪುರ ತಾಂಡದಲ್ಲಿ ಹಾದು ಹೋಗುವ ಹೊನ್ನಾಳಿ ರಸ್ತೆಯಲ್ಲಿ ಆನವಟ್ಟಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಕೆರೆಯ ದಡದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಸುಮಾರು 20 ಜನ ಪ್ರಯಾಣಿಕರಿದ್ದ ಬಸ್ ನಲ್ಲಿ ಎಲ್ಲರಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಅದೃಷ್ಠವಶಾತ್  ಪ್ರಾಣ ಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಿವಮೊಗ್ಗದಿಂದ ಬಸವಾಸಿಗೆ ಹೊರಟಿದ್ದ ಖಾಸಗಿ ಬಸ್ ನ್ಯಾಮತಿ ಮೂಲಕ ಶಿಕಾರಿಪುರದ ಜೀನಹಳ್ಳಿ ಶಿಕಾರಿಪುರ, ಶಿರಾಳಕೊಪ್ಪ ಸೊರಬ ಮೂಲಕ ಬಸವಾಸಿಗೆ ತೆರಳುವ ಬಸ್ ಆಗಿತ್ತು.


ಜೀನಹಳ್ಳಿ ಮೂಲಕ ಶಿಕಾರಿಪುರ ಬರುತ್ತಿದ್ದ ವೇಳೆ  ಚಾಲಕನ ನಿಯಂತ್ರಣ ತಪ್ಪಿ ಸದಾಶಿವಪುರ ತಾಂಡದ ಕೆರೆ ಏರಿಯಾದ ಮೇಲೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿ ಹೊಡೆದಿದೆ. ಅಲ್ಲೇ ಇದ್ದ ವಿದ್ಯುತ್ ಕಂಬಕ್ಕೂ ಡಿಕ್ಕಿ ಹೊಡೆದಿದೆ. ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. 
Previous Post Next Post