ತೀರ್ಥಹಳ್ಳಿ ಚರ್ಚ್ ಆವರಣದಲ್ಲಿ ಅಕ್ರಮ ಮರಳು: 39 ಲಕ್ಷರೂ, ದಂಡ! tth

ತೀರ್ಥಹಳ್ಳಿ  ಚರ್ಚ್ ಆವರಣದಲ್ಲಿ ಅಕ್ರಮ ಮರಳು: 39 ಲಕ್ಷರೂ, ದಂಡ !

ಶಿವಮೊಗ್ಗ: ಅಕ್ರಮವಾಗಿ ಮರಳು ಸಂಗ್ರಹಿಸಿದ್ದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಚರ್ಚ್ ಒಂದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬರೋಬ್ಬರಿ 39.42 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಗೆ ವಿಫಲವಾದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ತೀರ್ಥಹಳ್ಳಿ ಪಟ್ಟಣದ ಆಜಾದ್‌ ರಸ್ತೆಯಲ್ಲಿರುವ
'ಲೂರ್ದು ಮಾತಾ ಚರ್ಚ್ ಆವರಣದಲ್ಲಿ ಅಕ್ರಮವಾಗಿ
ಮರಳು ದಾಸ್ತಾನು ಮಾಡಿರುವ ಬಗ್ಗೆ ಬೆಂಗಳೂರಿನ
ಕೇಂದ್ರ ಕಚೇರಿಯಲ್ಲಿ ದೂರು ಸ್ವೀಕೃತವಾಗಿತ್ತು. 2025ರ ಮೇ 22 ರಂದು ಕೇಂದ್ರ ಕಚೇರಿ ಚಾಲಿತದಳದ ಹಿರಿಯ ಭೂ ವಿಜ್ಞಾನಿ ಶೋಭಾ ಎನ್, ಭೂ ವಿಜ್ಞಾನಿ ಗೋಪಿಕೃಷ್ಣ, ಚಾಲಿತ ದಳದ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್' 'ತಂಡ ಚರ್ಚ್ ಆವರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ತಾಳೆಯಾಗದ ದಾಖಲಾತಿಗಳು...

ಈ ವೇಳೆ ಚರ್ಚ್ ಆವರಣ 1 ರಲ್ಲಿ ಸುಮಾರು 980
ಮೆಟ್ರಿಕ್ ಟನ್ ಮರಳು ಹಾಗೂ ಆವರಣ 2 ರಲ್ಲಿ
ಅಂದಾಜಿ 100 ಮೆಟ್ರಿಕ್ ಟನ್ ಮರಳು ಮತ್ತು ಆವರಣ
'3 ರಲ್ಲಿ 200 ಮೆಟ್ರಿಕ್‌ ಟನ್ ದಾಸ್ತಾನು ಇರುವುದು
ಪತ್ತೆಯಾಗಿತ್ತು. ಆ ವೇಳೆ ಸ್ಥಳದಲ್ಲಿ ಹಾಜರಿದ್ದ ಚರ್ಚ್
ಸೆಕ್ರೆಟರಿ , ಚರ್ಚ್‌ ಅಭಿವೃದ್ಧಿ ಕಟ್ಟಡ ನಿರ್ಮಾಣಕ್ಕೆ ಮರಳು ದಾಸ್ತಾನು ಮಾಡಲಾಗಿದೆ. ಮರಳಿಗೆ ಪರವಾನಗಿ ಪಡೆಯಲಾಗಿದೆ. ಎಲ್ಲಾ ದಾಖಲೆಗಳನ್ನು ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳು ನೊಟೀಸ್ ಜಾರಿ ಮಾಡಿ,
ಪ್ರಕರಣ ಮುಕ್ತಾಯದವರೆಗೆ ಮರಳನ್ನು ಯಥಾಸ್ಥಿತಿ
ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದರು.

ಬಳಿಕ ಮೇ 29 ರಂದು ಪರವಾನಗಿ ಪ್ರತಿಗಳನ್ನು
ಚರ್ಚ್ ಕಡೆಯಿಂದ ಕಚೇರಿಗೆ ಸಲ್ಲಿಸಲಾಗಿತ್ತು. ಅದನ್ನು
ಪರಿಶೀಲಿಸಿದಾಗ 939 ಮರಳು ಪರವಾನಗಿಗಳು
ಹೊದಲ-ಅರಳಾಪುರ ಗ್ರಾಪಂ, ನೆರಟೂರು ಗ್ರಾಪಂ
ಮತ್ತು ಆರಗ ಗ್ರಾಪಂ ವತಿಯಿಂದ ತೀರ್ಥಹಳ್ಳಿ
ತಾಲೂಕಿನ ವಿವಿಧ ಗ್ರಾಮಗಳಿಗೆ ವಿತರಣೆ ಆಗಿರುವುದು
ಕಂಡುಬಂದಿತ್ತು. ದಾಖಲೆ ನೋಡಿದಾಗ ಆಶ್ರಯ
ಮನೆಗಳಿಗೆ ನೀಡಲಾದ ಮರಳು, ಹೆಸರೇ ಇಲ್ಲದ
ವ್ಯಕ್ತಿಗಳಿಗೆ ನೀಡಲಾದ ಮರಳು, ಆರು ಚಕ್ರದ ಟ್ರಕ್
ಗಳಲ್ಲಿ ಸಾಗಿಸಲಾದ 1.5 ಮೆಟ್ರಿಕ್ ಟನ್ ಮರಳು
ಇತ್ಯಾದಿ ಕಂಡುಬಂದಿತ್ತು. ಅಷ್ಟೇ ಅಲ್ಲದೇ 2024
ರಿಂದಲೂ ಹೊದಲ ಅರಳಾಪುರ ಗ್ರಾಪಂ, ನೆರಟೂರು
ಗ್ರಾಪಂ ಮತ್ತು ಆರಗಗ್ರಾಪಂ ವ್ಯಾಪ್ತಿಯಿಂದ ನೂರಾರು
ಹೆಸರುಗಳಲ್ಲಿ ಲೂರ್ದು ಮಾತೆ ಚರ್ಚ್‌ಗೆ ಮರಳು
ಸಾಗಿಸಿರುವುದು ಕಂಡುಬಂದಿತ್ತು. ಈ ಸಂಬಂಧ
ವ್ಯಕ್ತಿಯೋರ್ವರು ದೂರು ಸಹ ದಾಖಲಿಸಿದ್ದರು.

ಪರವಾನಗಿ ಕೊಟ್ಟಿಲ್ಲ ಎಂದ ಪಿಡಿಒಗಳು...

ಬಳಿಕ ಮೂರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಲೂರ್ದು ಮಾತಾ ಚರ್ಚ್‌ ಗೆ ಮರಳು ಪರವಾನಗಿ ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿತ್ತು.
ಆದರೆ ಮೂರೂ ಗ್ರಾಪಂ ಪಿಡಿಒಗಳು ಚರ್ಚ್‌ಗೆ ಯಾವುದೇ ಮರಳು ಸಾಗಣೆ ಪರವಾನಗಿ ನೀಡಿಲ್ಲ ಎಂದು ತಿಳಿಸಿದ್ದರು.
ಚರ್ಚ್ ಆವರಣದಲ್ಲಿ ಸಂಗ್ರಹಿಸಲಾದ ಮರಳಿಗೂ, ಗ್ರಾಪಂಗಳಿಂದ ನೀಡಿರುವ ಮರಳು ಪರವಾನಗಿಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಹಾಗಾಗಿ ಚರ್ಚ್‌ ಆವರಣದಲ್ಲಿ ದಾಸ್ತಾನು ಮಾಡಲಾಗಿದ್ದ ಮರಳಿಗೆ ಯಾವುದೇ ಅಗತ್ಯ ಪರವಾನಗಿಗಳು ಇಲ್ಲದ ಕಾರಣ, 1280 ಟನ್ ಅಕ್ರಮ ಮರಳು ದಾಸ್ತಾನು ಎಂದು
ಪರಿಗಣಿಸಿ 39,42,400 ರೂ. ದಂಡ ಪಾವತಿ ಮಾಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೂಚನೆ ನೀಡಿದೆ.
Previous Post Next Post