ತೀರ್ಥಹಳ್ಳಿ ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ..!
ಮಾದರಿಯಾದ ಸಿಪಿಐ ಇಮ್ರಾನ್ ಬೇಗ್..!
ತೀರ್ಥಹಳ್ಳಿ : ಗಣಪತಿ ಹಬ್ಬ ಎಂದರೆ ಹಾಗೆ ಬೇಧ ಭಾವ ಇಲ್ಲದೆ ಆಚರಿಸುವ ವಿಶೇಷ ಹಬ್ಬ. ಗಣಪತಿ ವಿಸರ್ಜನೆ ವೇಳೆ ಪೊಲೀಸರು ಬೈಯುತ್ತಾರೆ ಎಂಬ ಮಾತು ಕೇಳಿ ಬರುವುದು ಸಹಜ ಆದರೆ ಸುಖಾ ಸುಮ್ಮನೆ ಬೈಯಲ್ಲ ನಮಗೂ ಹಬ್ಬ ಆಚರಿಸಲು ಬರುತ್ತೆ ನಾವು ಗಣಪತಿ ಪೂಜಿಸಿ ವಿಜೃಂಭಣೆಯಿಂದ ಆಚರಿಸುತ್ತೇವೆ ಎಂದು ತೀರ್ಥಹಳ್ಳಿ ಪೊಲೀಸರು ಮಾಡಿ ತೋರಿಸಿದ್ದಾರೆ.
ಹೌದು ಕಳೆದ ಮೂರು ವರ್ಷಗಳಿಂದ ಪಟ್ಟಣದ ರಥಬೀದಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಗಣಪತಿ ಹಬ್ಬಕ್ಕೆ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಇಂದು ವಿಸರ್ಜನೆ ಮಾಡಲಾಯಿತು. ಈ ವೇಳೆ ಚಂಡೆ, ನಾಸಿಕ್ ಬ್ಯಾಂಡ್ ಗೆ ಪೊಲೀಸರೆಲ್ಲರೂ ಕುಣಿದು ಕುಪ್ಪಳಿಸಿದರು.
ಇಂದು ಪಟ್ಟಣದಲ್ಲಿ 8 ಕ್ಕೂ ಹೆಚ್ಚು ಗಣಪತಿ ವಿಸರ್ಜನೆ ಹಾಗೂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 30 ಕ್ಕೂ ಹೆಚ್ಚು ಗಣಪತಿ ವಿಸರ್ಜನೆ ಇರುವುದರಿಂದ ಪೊಲೀಸರು ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕಾದ ಕಾರಣ ಮಧ್ಯಾಹ್ನದ ಒಳಗಾಗಿ ಗಣಪತಿ ವಿಸರ್ಜನೆ ಮಾಡಲಾಯಿತು.
ಪೊಲೀಸ್ ಠಾಣೆಯಿಂದ ಆಗುಂಬೆ ಬಸ್ ನಿಲ್ದಾಣದವರೆಗೆ ನಂತರ ತುಂಗಾ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು. ಗಣಪತಿ ವಿಸರ್ಜನೆ ಅತ್ಯಂತ ಸರಳವಾಗಿ ಹೇಗೆ ಆಚರಿಸಬಹುದು ಹಾಗೆ ನಮಗೂ ಡ್ಯಾನ್ಸ್ ಬರುತ್ತೆ ಎಂದು ಪೊಲೀಸರು ತೋರಿಸಿಕೊಟ್ಟರು. ಸದಾ ಕೆಲಸದ ಒತ್ತಡದಲ್ಲೇ ಇರುವ ಪೊಲೀಸರಿಗೆ ಇಂದು ಸ್ವಲ್ಪ ರೀಲೀಫ್ ಸಿಕ್ಕಿದಂತೆ ಇತ್ತು.
ಮಾದರಿಯಾದ ಸಿಪಿಐ ಇಮ್ರಾನ್ ಬೇಗ್..!
ಧರ್ಮ ಬದಲಾದರೆ ಏನಂತೆ ದೇವರು ಎಲ್ಲರಿಗೂ ಒಂದೇ ಎಂದು ಪೂಜೆ ಸಲ್ಲಿಸಿ ನಂತರ ಗಣಪತಿ ಇದ್ದಂತಹ ವಾಹನದ ಡ್ರೈವಿಂಗ್ ಮಾಡಿದ ಸಿಪಿಐ ಇಮ್ರಾನ್ ಬೇಗ್ ನಂತರ ತಾವು ಸಹ ಇತರ ಪೊಲೀಸ್ ಸಿಬ್ಬಂದಿಗಳ ಜೊತೆಗೆ ಡ್ಯಾನ್ಸ್ ಮಾಡಿದರು. ತುಂಗಾ ನದಿಯಲ್ಲಿ ವಿಸರ್ಜನೆ ಮಾಡುವ ವೇಳೆ ಸಹ ತಾವೇ ಕೈಯಲ್ಲಿ ಗಣಪತಿ ತೆಗೆದುಕೊಂಡು ಹೋಗಿದ್ದು ನೋಡಿದ ಸಾರ್ವಜನಿಕರು ಸೌಹಾರ್ದ ಸಭೆಗೆ ಕಾರಣ ಯಾರು ಎಂದು ತಿಳಿಯಿತು ಎಂದು ಮಾತನಾಡಿದರು..
ಒಟ್ಟಿನಲ್ಲಿ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆ ವೇಳೆ ಎಲ್ಲಾ ಪೋಲೀಸರ ಡ್ಯಾನ್ಸ್ ಕಣ್ಮನ ಸೆಳೆಯಿತು.
Tags:
ಗಣೇಶೋತ್ಸವ