ತುಂಬಿದ ಶರಾವತಿ - ಇಂದು ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಕ್ಕೆ..!
ಸಾಗರ : ಶರಾವತಿ ನೀರು ತುಂಬಿದ ಹಿನ್ನಲೆಯಲ್ಲಿ ಇಂದು ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1819 ಅಡಿ ಇರುವ ಲಿಂಗನ ಮಕ್ಕಿ ಜಲಾಶಯದಲ್ಲಿ
1816.15 ಅಡಿ ನೀರು ಇಂದು ಸಂಗ್ರಹವಾಗಿದೆ. ಅಣೆಕಟ್ಟು ತುಂಬಿದ ಹಿನ್ನಲೆ ಇಂದು ಬೆಳಗ್ಗೆ ನೀರು ಹೊರಕ್ಕೆ ಬಿಡಲಾಗುತ್ತಿದ್ದು 53,500 ಕ್ಯೂಸೆಕ್ ನೀರು ಜಲಾಶಯಕ್ಕೆ
ಒಳಹರಿವು ಇದ್ದು ಲಿಂಗನಮಕ್ಕಿ ಅಣೆಕಟ್ಟಿನ ರೇಡಿಯಲ್ ಗೇಟ್‌ಗಳ ಮೂಲಕ ಇಂದು ನೀರು ಹೊರಕ್ಕೆ ಬಿಡಲಾಗುತ್ತಿದೆ.
ಬೆಳಗ್ಗೆ 10 ಗಂಟೆಗೆ 20 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುವುದು. ಆ ನಂತರ ಹಂತ ಹಂತವಾಗಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಣೆಕಟ್ಟಿಯ ಕೆಳಭಾಗದಲ್ಲಿ ವಾಸಿಸುವ ಸಾರ್ವಜನಿಕರಿಗೆ ಪ್ರವಾಹದ ಮುನ್ನಚ್ಚರಿಕೆಯನ್ನು ಜಲಾಶಯದ ಅಧಿಕಾರಿಗಳು ನೀಡಿದ್ದಾರೆ. ಇಂದು ಜಲಾಶಯದಿಂದ ನೀರು ಬಿಡುವುದರಿಂದ ಜೋಗ ಜಲಪಾತ ಕಣ್ಮನ ಸೆಳೆಯಲಿದೆ.
Tags:
ಸಾಗರ ಸುದ್ದಿ