ತುಂಗಾ ನದಿಗೆ ಬಾಗಿನ ಅರ್ಪಿಸಿದ ರಾಮೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು..!
ತೀರ್ಥಹಳ್ಳಿ : ಮಘೆ ಮಳೆಯ ಅಬ್ಬರ ಹೆಚ್ಚಾಗಿದ್ದು ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ತುಂಗಾ ನದಿಯ ಮಧ್ಯದಲ್ಲಿ ಇರುವ ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗುವ ಹಂತಕ್ಕೆ
ತಲುಪಿದ್ದು ಈ ಕಾರಣದಿಂದ ಶ್ರೀರಾಮೇಶ್ವರ ದೇವರ ನೂತನ ಸಮಿತಿ ಸದಸ್ಯರು ತುಂಗೆಗೆ ಭಾಗಿನ ಅರ್ಪಿಸಿದರು.
ಶುಕ್ರವಾರ ತುಂಗಾ ನದಿಯ ದಡದಲ್ಲಿ ಶ್ರೀರಾಮೇಶ್ವರ ದೇವರ ವ್ಯವಸ್ಥಾಪನ ಸಮಿತಿ ಸದಸ್ಯರು ಭಕ್ತರ ಜೊತೆಗೆ ಆಗಮಿಸಿ ಶಾಂತ ರೀತಿಯಲ್ಲಿ ತುಂಗೆಯು ಹರಿಯಲಿ, ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲಿ ಎಂದು ಬೇಡಿಕೆಯನ್ನಿಟ್ಟು ತೀರ್ಥಹಳ್ಳಿಯ ತುಂಗಾ ನದಿಗೆ ಭಕ್ತಿ ಭಾವದಿಂದ ಬಾಗಿನ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ನಿರ್ದೇಶಕರಾದ ವರಲಕ್ಷ್ಮಿ, ನಾಗಭೂಷಣ್, ರಾಮೇಶ್ವರ ದೇವಸ್ಥಾನದ ಅರ್ಚಕರಾದ ರಾಜಶೇಖರ್ ಭಟ್, ಮಹಾಬಲರಾವ್, ತ್ರಿವೇಣಿ ಸುರೇಶ, ಜ್ಯೋತಿ, ಹಾಲಿಗೆ ನಾಗರಾಜ್, ಪೂರ್ಣೇಶ್, ಪ್ರದೀಪ್ ಸೇರಿ ಹಲವರು ಇದ್ದರು.
Tags:
ತೀರ್ಥಹಳ್ಳಿ ಸುದ್ದಿ