ಕೊಪ್ಪ ಸರ್ಕಲ್ ನಲ್ಲಿ ಅಪಾಯಕ್ಕೆ ಅಹ್ವಾನ ನೀಡುತ್ತಿದೆ ತೆಂಗಿನ ಮರ..!ಸಂಬಂಧಪಟ್ಟ ಅಧಿಕಾರಿಗಳು ಗಮನಿಸಲಿ..! Koppa circle

ಕೊಪ್ಪ ಸರ್ಕಲ್ ನಲ್ಲಿ ಅಪಾಯಕ್ಕೆ ಅಹ್ವಾನ ನೀಡುತ್ತಿದೆ ತೆಂಗಿನ ಮರ..!

ಸಂಬಂಧಪಟ್ಟ ಅಧಿಕಾರಿಗಳು ಗಮನಿಸಲಿ..!


ತೀರ್ಥಹಳ್ಳಿ : ಪಟ್ಟಣದ ಕೊಪ್ಪ ಸರ್ಕಲ್ ನ ಆಟೋ ನಿಲ್ದಾಣದ ಪಕ್ಕ ವಾಲಿ ನಿಂತಿರುವ ತೆಂಗಿನಮರವೊಂದಿದ್ದು ಮರದ ಕೊಂಬೆಗಳು ಹಾಗೂ ಕಾಯಿಗಳು ದಿನನಿತ್ಯ ಕೆಳಗೆ ಬೀಳುತ್ತಿದ್ದು ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂಬುದಾಗಿ ಅಲ್ಲಿನ ಆಟೋ ಚಾಲಕರು ಹಾಗೂ ಅಕ್ಕಪಕ್ಕದ ಅಂಗಡಿ ಮಾಲೀಕರು ಆರೋಪಿಸಿದ್ದಾರೆ.

ಸೋಮವಾರ ರಾತ್ರಿ ಏಕಾಏಕಿ ತೆಂಗಿನ ಕಾಯಿ ಹಾಗೂ ಮರದ ಹೆಡ್ಲು ಕೆಳಗೆ ಬಿದ್ದಿದ್ದು ಕೆಳಗೆ ಬಸ್ ಗಾಗಿ ಕಾಯುತ್ತಿದ್ದವರ ಮೇಲೆ ಬೀಳುವುದರಲ್ಲಿತ್ತು. ಸ್ವಲ್ಪ ಮಟ್ಟಿನ ಅವಘಡದಿಂದ ಪಾರಾಗಿದ್ದಾರೆ. ಈಗಾಗಲೇ ಹಲವಾರು ಬಾರಿ ಮರದ ಹೆಡ್ಲು ಹಾಗೂ ಕಾಯಿ ತೆರವು ಮಾಡಬೇಕು ಎಂದು ಆಟೋ ಚಾಲಕರು ಮನವಿ ಮಾಡಿದ್ದರು ಸಹ ಯಾರು ಅದಕ್ಕೆ ಸ್ಪಂದನೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಪ್ರತಿದಿನ ಆಟೋ ಚಾಲಕರು, ಬಸ್ ಕಾಯುವ ಸಾರ್ವಜನಿಕರು ಅದೇ ಮರದ ಕೆಳಗೆ ನಿಲ್ಲುತ್ತಿದ್ದು ಏನಾದರು ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ತೆಂಗಿನಮರದ ಹೆಡ್ಲು ಹಾಗೂ ಕಾಯಿಗಳನ್ನು ತೆರವು ಮಾಡಬೇಕಿದೆ..


Previous Post Next Post