ರುದ್ರಭೂಮಿಗಳಿಗೆ ಹೈ ಮಾಸ್ಕ್ ದೀಪ ಅಳವಡಿಕೆ... tth

ರುದ್ರಭೂಮಿಗಳಿಗೆ ಹೈ ಮಾಸ್ಕ್ ದೀಪ ಅಳವಡಿಕೆ...

ತೀರ್ಥಹಳ್ಳಿ : ಪಟ್ಟಣ ಪಂಚಾಯತ್ ವ್ಯಾಪ್ತಿಯ ರುದ್ರ ಭೂಮಿಗಳಿಗೆ ಹೈ ಮಾಸ್ಕ್ ದೀಪ ಅಳವಡಿಕೆ ಮಾಡಲು ತೀರ್ಮಾನಿಸಿದ್ದು ರುದ್ರ ಭೂಮಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣದ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ರುದ್ರ ಭೂಮಿಗಳಲ್ಲಿ ಸಂಜೆ 6:30 ರ ನಂತರ ಅಂತ್ಯ ಸಂಸ್ಕಾರ ಮಾಡಲು ಬಹಳ ಕಷ್ಟವಾಗುತ್ತಿತ್ತು. ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದೆ ಬಹಳ ತೊಂದರೆ ಆಗುತ್ತಿತ್ತು. ಈ ವಿಷಯ ತಿಳಿದ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಆಸಾದಿ ಮೂರು ರುದ್ರಭೂಮಿಗಳಿಗೆ ಹೈ ಮಾಸ್ಕ್ ದೀಪ ಅಳವಡಿಕೆ ಮಾಡಲು ತಿಳಿಸಿದ್ದಾರೆ. ಹಿಂದೂ ರುದ್ರಭೂಮಿಯಲ್ಲಿ ಪರಿಶೀಲನೆ ನಡೆಸಿ ಇನ್ನೊಂದು ವಾರದ ಒಳಗಾಗಿ ಹೈ ಮಾಸ್ಕ್ ದೀಪ ಅಳವಡಿಸುವುದಾಗಿ ತಿಳಿಸಿದರು.  

ಈ ಸಂದರ್ಭದಲ್ಲಿ ಪ. ಪಂ ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಸುಶೀಲ ಶೆಟ್ಟಿ, ಶಬನಮ್ ಸೇರಿ ಹಲವರು ಇದ್ದರು..

Previous Post Next Post