ಆಗುಂಬೆ ಸಮೀಪದ ನಾಬಳ ಬಳಿ ರಸ್ತೆ ಬಂದ್..! Agumbe

ಆಗುಂಬೆ ಸಮೀಪದ ನಾಬಳ ಬಳಿ ರಸ್ತೆ ಬಂದ್..! 

ತೀರ್ಥಹಳ್ಳಿ :  ಆಶ್ಲೇಷ ಮಳೆ ಹಾಗೂ ಮಘೆ ಮಳೆಯ ಆರ್ಭಟಕ್ಕೆ ನದಿ ಕೊಳ್ಳಗಳು ತುಂಬಿ ಹರಿಯುತ್ತಿದ್ದು ಮಾಲತಿ ನದಿಯ ನೀರಿನ ಮಟ್ಟ ಹೆಚ್ಚಳವಾಗಿದೆ.

ಹೋನ್ನೆತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ
ನಾಬಳ  ಬಳಿ ರಸ್ತೆ ಬಂದ್ ಆಗಿದ್ದು ರಸ್ತೆ ಮೇಲೆ ನೀರು ಹರಿಯುತ್ತಿದೆ. ರಾತ್ರಿಯ ಸಮಯದಲ್ಲಿ ಓಡಾಟ ನಡೆಸುವ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ಸ್ಥಳೀಯರಾದ ಚಂದ್ರಹಾಸ್ ಮತ್ತು ಸ್ನೇಹಿತರು ರಸ್ತೆಗೆ ಬ್ಯಾರಿಕೆಡ್ ಹಾಕಿದ್ದಾರೆ. ಕಳೆದ ತಿಂಗಳ 26 ರಂದು ನಾಬಳ ರಸ್ತೆ ಬಂದ್ ಆಗಿತ್ತು. ಈಗ ಮಳೆಯಿಂದ ಎರಡನೇ ಬಾರಿ ಬಂದ್ ಆಗುತ್ತಿದೆ.


ಕೊಪ್ಪ, ಶೃಂಗೇರಿ ಕಮ್ಮರಡಿ, ಆಗುಂಬೆ ಭಾಗದಲ್ಲಿ ಬಾರಿ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗದ್ದೆ ನೆಟ್ಟಿ ಮಾಡಿದ್ದ ರೈತರು ಮಳೆಯ ಆರ್ಭಟ ನೋಡಿ ಕಂಗಲಾಗಿದ್ದಾರೆ. ನಾಳೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದೆ.. 
Previous Post Next Post