ಮಘೆ ಮಳೆಯ ಅಬ್ಬರ - ತೀರ್ಥಹಳ್ಳಿಯ ಶಾಲಾ ಕಾಲೇಜು ಗಳಿಗೆ ನಾಳೆ ರಜೆ ಘೋಷಣೆ Tth

ಮಘೆ ಮಳೆಯ ಅಬ್ಬರ - ತೀರ್ಥಹಳ್ಳಿಯ ಶಾಲಾ ಕಾಲೇಜು ಗಳಿಗೆ ನಾಳೆ ರಜೆ ಘೋಷಣೆ

ತೀರ್ಥಹಳ್ಳಿ: ತಾಲೂಕಿನಾದ್ಯಂತ ನಿರಂತರವಾಗಿ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ  ಮುಂಜಾಗೃತಾ ಕ್ರಮವಾಗಿ 18-8-2025 ರ ಸೋಮವಾರ  ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ, ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ತಹಸೀಲ್ದಾರ್ ರಂಜಿತ್ ಆದೇಶ ಹೊರಡಿಸಿದ್ದಾರೆ.


ಕಳೆದ 24 ಗಂಟೆಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆಯಾಗುವ ಮುನ್ಸೂಚನೆಯಿಂದ ರಜೆ ಘೋಷಿಸಲಾಗಿದೆ. ಈಗ ನೀಡಿರುವ ರಜೆಯನ್ನು ಮುಂದಿನ ಶನಿವಾರದಂದು ಸರಿಪಡಿಸಿಕೊಳ್ಳಲು ತಿಳಿಸಲಾಗಿದೆ.
Previous Post Next Post