ಮೇಲಿನಕುರುವಳ್ಳಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ 28 ನೇ ವರ್ಷದ ಗಣೇಶೋತ್ಸವ - ಈ ಬಾರಿ ಎಷ್ಟು ದಿನ - ಏನೆಲ್ಲಾ ಕಾರ್ಯಕ್ರಮ ಇರುತ್ತೆ..!?
ತೀರ್ಥಹಳ್ಳಿ : ಗಣಪತಿ ವಿಸರ್ಜನೆಯಲ್ಲಿ ಯುವಕರ ಜಬರ್ದಸ್ತ್ ಡ್ಯಾನ್ಸ್ ಮೂಲಕವೇ ಪ್ರಸಿದ್ದಿ ಪಡೆದ
ಗಣೇಶೋತ್ಸವ ಸಮಿತಿಯಾಗಿರುವ ಮೇಲಿನಕುರುವಳ್ಳಿ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಈ ಬಾರಿ 28 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಆಗಸ್ಟ್ 27ರಿಂದ ಸೆ.6 ರವರೆಗೆ 11 ದಿನಗಳ ಪರ್ಯಂತ ನಡೆಸಲು ತೀರ್ಮಾನಿಸಲಾಗಿದೆ.
ಕಾರ್ಯಕ್ರಮ ಏನೇನು..!?
ದಿನಾಂಕ-27/8/25 ಬುಧವಾರ ವಿದ್ಯಾಗಣಪತಿಯ ಪ್ರತಿಷ್ಠಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ
30/8/25 ಶನಿವಾರ ಸಂಜೆ 7 ಕ್ಕೆ ಸೃಷ್ಟಿ ಕಲಾ ತಂಡ (ರಿ) ಮೇಲಿನಕುರುವಳ್ಳಿ ಇವರಿಂದ ನೃತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ
2/9/25 ಮಂಗಳವಾರ ಬೆಳಗ್ಗೆ 9 ಕ್ಕೆ ಏಕ ನಾರಿಕೇಳ ಗಣಹೋಮ, 11 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.. ಸಂಜೆ 7 ಗಂಟೆಗೆ ಕಾಂತರ ಖ್ಯಾತಿಯ ಹಾಸ್ಯ ನಟ ದೀಪಕ್ ರೈ ಮತ್ತು ತಂಡದವರಿಂದ ಹಾಸ್ಯಮಯ ನಾಟಕ ನಡೆಯಲಿದೆ.
5 /9/25 ಶುಕ್ರವಾರ ಸಂಜೆ 7 ಕ್ಕೆ ನಂದನ್ ಕುಮಾರ್ ಅವರ ನಿರೂಪಣೆಯಲ್ಲಿ ಆಟ, ಓಟ ಒಳಗೊಂಡ ವಿಶಿಷ್ಟ ವಿಭಿನ್ನ ರೀತಿ ಕಾರ್ಯಕ್ರಮ ನಡೆಯಲಿದೆ.
6/9/25 ಶನಿವಾರ ವಿವಿಧ ವೇಷ ಭೂಷಣಗಳೊಂದಿಗೆ ರಾಜಬೀದಿ ಉತ್ಸವ ನಡೆಯಲಿದ್ದು ನದಿಯಲ್ಲಿ ಸ್ವಾಮಿಯ ವಿಸರ್ಜನೆ ನಡೆಯಲಿದೆ.
Tags:
ಗಣೇಶೋತ್ಸವ