ರೈಲ್ವೆ ಹಳಿ ಮೇಲೆ ಮರ - ತಡವಾಗಿ ಸಂಚರಿಸಿದ ರೈಲುಗಳು Train

ರೈಲ್ವೆ ಹಳಿ ಮೇಲೆ ಮರ  - ತಡವಾಗಿ ಸಂಚರಿಸಿದ ರೈಲುಗಳು

ಶಿವಮೊಗ್ಗ: ಶಿವಮೊಗ್ಗ - ಭದ್ರಾವತಿ ನಡುವಿನ ಬಿಳಕಿ ಕೊಪ್ಪದಲು ಬಳಿ ರೈಲ್ವೆ ಹಳಿ ಮೇಲೆ ಮರ ಬಿದ್ದ ಪರಿಣಾಮ ರೈಲುಗಳ ಸಂಚಾರದಲ್ಲಿ ತಡವಾಗಿದೆ.

ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ತಲುಪಬೇಕಾಗಿದ್ದ ಯಶವಂತಪುರ - ಶಿವಮೊಗ್ಗ ರೈಲು ಎರಡೂವರೆ ಗಂಟೆ ತಡವಾಗಿ ಚಲಿಸಿದೆ. ಇದರ ಪರಿಣಾಮ ಮಧ್ಯಾಹ್ನ 3.45ಕ್ಕೆ ಶಿವಮೊಗ್ಗದಿಂದ ಯಶವಂತಪುರಕ್ಕೆ ಹೊರಡಬೇಕಿದ್ದ ರೈಲು ಸಹ ತಡವಾಗಿದೆ. ರೈಲು 4 ಗಂಟೆ ಸುಮಾರಿಗೆ ಶಿವಮೊಗ್ಗದತ್ತ ಹೊರಟಿದೆ ಪ್ರಯಾಣಿಕರು ತಿಳಿಸಿದ್ದಾರೆ.
Previous Post Next Post