ತೀರ್ಥಹಳ್ಳಿಯಲ್ಲಿ ನಾಳೆ ಮನೆ ಮನೆಗೂ ಪೊಲೀಸ್ ಕಾರ್ಯಕ್ರಮದ ಉದ್ಘಾಟನೆ.. Police

ತೀರ್ಥಹಳ್ಳಿಯಲ್ಲಿ ನಾಳೆ ಮನೆ ಮನೆಗೂ ಪೊಲೀಸ್ ಕಾರ್ಯಕ್ರಮದ ಉದ್ಘಾಟನೆ..
ತೀರ್ಥಹಳ್ಳಿ : ರಾಜ್ಯ ಸರ್ಕಾರ ನೂತನವಾಗಿ ಮಾಡಲಾಗಿರುವ ನಾಳೆ ಮನೆ ಮನೆಗೂ ಪೊಲೀಸ್ ಎಂಬ ಹೊಸ ಯೋಜನೆಯ ಉದ್ಘಾಟನೆ ನಾಳೆ ತೀರ್ಥಹಳ್ಳಿಯಲ್ಲಿ ನಡೆಯಲಿದೆ.

ಪಟ್ಟಣದ ಚರ್ಚ್ ರಸ್ತೆಯ ಯುನಿಟಿ ಹಾಲ್ ನಲ್ಲಿ ಮಧ್ಯಾಹ್ನ 3.30ಕ್ಕೆ ಮಾನ್ಯ ಪೊಲೀಸ್ ಉಪಾಧೀಕ್ಷಕರಾದ ಅರವಿಂದ್ ಕಲಗುಜ್ಜಿ ಕಾರ್ಯಕ್ರಮದ ಉದ್ಘಾಟನೆ ನಡೆಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ನಾಗರೀಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರುಗಳು ಆಗಮಿಸಬೇಕೆಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
Previous Post Next Post