ಪುಷ್ಯಮಳೆ ಅಬ್ಬರ - ಹುಲಿಕಲ್ ಘಾಟಿಯಲ್ಲಿ ಭೂಕುಸಿತ Hulikal Ghat

ಪುಷ್ಯಮಳೆ ಅಬ್ಬರ - ಹುಲಿಕಲ್ ಘಾಟಿಯಲ್ಲಿ ಭೂಕುಸಿತ
ಹೊಸನಗರ : ಪುಷ್ಯಮಳೆಯ ಅಬ್ಬರದಿಂದ ತೀರ್ಥಹಳ್ಳಿಯಿಂದ ಕುಂದಾಪುರಕ್ಕೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಭೂ ಕುಸಿತ ಉಂಟಾಗಿದೆ..

ರಾಜ್ಯ ಹೆದ್ದಾರಿ 52 ಹಾದು ಹೋಗುವ ಬಾಳೆಬರೆ ಫಾಲ್ಸ್ ಪಕ್ಕದಲ್ಲೇ ಘಾಟಿ ಕುಸಿದಿದೆ. ರಸ್ತೆಯ ಮೇಲೆ ಮಣ್ಣು ಹಾಗೂ
ಘಾಟಿಯಲ್ಲಿ ಇದ್ದ ಮರ ಕುಸಿದು ಬಿದ್ದಿದೆ. ಕುಸಿತದ ಪರಿಣಾಮ ರಸ್ತೆ ಸಂಪರ್ಕ ಕಡಿತವಾಗಿದೆ. ಈ ಹಿಂದೆ ಹೇರ್ ಘಾಟಿಯ ಪಿನ್ ತಿರುವಿನಲ್ಲಿ ಕುಸಿದಿತ್ತು. ಘಾಟಿ ಕುಸಿತದಿಂದ  ವಾಹನ ಸವಾರರು ಪರದಾಡುತ್ತಿದ್ದಾರೆ.

ಘಾಟಿ ಕುಸಿತದ ಪರಿಣಾಮ ಸಂಚಾರ ಬಂದ್ ಮಾಡಲಾಗಿದ್ದು ಘಾಟಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ.  ಸ್ಥಳಕ್ಕೆ ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Previous Post Next Post