ಅಡುಗೆ ಕೆಲಸದಲ್ಲಿ ಗುರುತಿಸಿಕೊಂಡಿದ್ದ ಬುಕ್ಲಾಪುರದ ಮಧುಸೂದನ್ ಹೆಬ್ಬಾರ್ ಇನ್ನಿಲ್ಲ tth

ಅಡುಗೆ ಕೆಲಸದಲ್ಲಿ ಗುರುತಿಸಿಕೊಂಡಿದ್ದ ಬುಕ್ಲಾಪುರದ ಮಧುಸೂದನ್ ಹೆಬ್ಬಾರ್ ಇನ್ನಿಲ್ಲ

ತೀರ್ಥಹಳ್ಳಿ: ಉತ್ತಮ ಅಡುಗೆ ಕೆಲಸಗಾರರಾಗಿ ತೀರ್ಥಹಳ್ಳಿಯಲ್ಲೇ ಗುರುತಿಸಿಕೊಂಡಿದ್ದ ಬುಕ್ಲಾಪುರದ ಮಧುಸೂದನ್ ಹೆಬ್ಬಾರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ..

ಹಲವು ಅಡುಗೆ ಗುತ್ತಿಗೆದಾರರೊಂದಿಗೆ ಕೆಲಸ ಮಾಡುತ್ತಾ ಚಿರಪರಿಚಿತರಾಗಿದ್ದ ಇವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.. ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಮಧು ಅವರ ನಿಧನಕ್ಕೆ ಸ್ನೇಹಿತರು, ಬಂಧುಗಳು ಸಂತಾಪ ಸೂಚಿಸಿದ್ದಾರೆ.
Previous Post Next Post