ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನಾಪತ್ತೆಯ ಶಂಕೆ..!?
ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು ಈ ಘಟನೆ ಬಾಳೆಬೈಲು ಹೊಸ ಸೇತುವೆಯ ಬಳಿ ನಡೆದಿದೆ..
ಮೂಲತಃ ದಾವಣಗೆರೆಯವರಾಗಿರುವ ಯುವಕರು ಗಾರೆ ಕೆಲಸಕ್ಕಾಗಿ ತೀರ್ಥಹಳ್ಳಿಗೆ ಬಂದಿದ್ದರು ಎನ್ನಲಾಗುತ್ತಿದ್ದು ಸಂಜೆಯ ವೇಳೆ ಈಜಲು ತೆರಳಿದ್ದಾರೆ. ಶಿವು ಹಾಗೂ ರುದ್ರೇಶ್ ಎಂಬ ಯುವಕರು ನಾಪತ್ತೆಯಾಗಿದ್ದಾರೆ..
ಈಜಲು ನೀರಿನ ಮಟ್ಟ ತಿಳಿಯದೆ ಯುವಕರು ನಾಪತ್ತೆಯಾಗಿರುವುದಾಗಿ ಜೊತೆ ಇದ್ದವರು ತಿಳಿಸಿದ್ದಾರೆ.
ಕತ್ತಲೆಯಾಗಿರುವ ಕಾರಣ ಹುಡುಕಾಟಕ್ಕೆ ತೊಂದರೆಯಾಗಿದೆ.. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಾಕ ದಳ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ..
Tags:
ತುಂಗಾ ನದಿ