ಶ್ರೇಯೋಭಿವೃದ್ಧಿ ಹೊಂದದ ನಮ್ಮ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್..! Selfi Point

ಶ್ರೇಯೋಭಿವೃದ್ಧಿ ಹೊಂದದ ನಮ್ಮ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್..!


ತೀರ್ಥಹಳ್ಳಿ : ಕಳೆದ ಆರು ತಿಂಗಳ ಹಿಂದೆ ತೀರ್ಥಹಳ್ಳಿ ಪಟ್ಟಣದಲ್ಲಿ ನಮ್ಮ ತೀರ್ಥಹಳ್ಳಿ ಎಂಬ ಸೆಲ್ಫಿ ಪಾಯಿಂಟ್ ನಿರ್ಮಿಸಲು ಪಟ್ಟಣ ಪಂಚಾಯತ್ ನಿಂದ ಆದೇಶ ಹೊರಡಿಸಿದ್ದು ಅದು ಟೆಂಡರ್ ಸಹ ಆಗಿತ್ತು. ಆದರೆ ಅದನ್ನು ಹಾಕುವ ಜವಾಬ್ದಾರಿ ಹೊತ್ತವರಿಗೆ ಇಲ್ಲಿಯವರೆಗೆ ನಮ್ಮ ತೀರ್ಥಹಳ್ಳಿ ಎಂಬ ಪದ ಬರೆಯುವುದು ಹೇಗೆ ಎಂಬುದು ಗೊತ್ತಿಲ್ಲವೇನೋ ಎಂಬುದಾಗಿ ಸಾರ್ವಜನಿಕರು ಮಾತನಾಡುತ್ತಿದ್ದಾರೆ.


ರಾಮೇಶ್ವರ ದೇವರ ರಥೋತ್ಸವಕ್ಕೂ ಮೊದಲೇ ಸೆಲ್ಫಿ ಪಾಯಿಂಟ್ ಹಾಕಲಾಗುತ್ತದೆ ಜಾತ್ರೆಗೆ ಬಂದವರು ಸೆಲ್ಫಿ ತೆಗೆದುಕೊಳ್ಳಬಹುದು ಎಂಬ ಮಾತು ಕೇಳಿ ಬಂದಿತ್ತು.
ಆದರೆ ಜಾತ್ರೆ ಮುಗಿದು ಆರು ತಿಂಗಳು ಕಳೆದರು ಜನರಿಗೆ ಸೆಲ್ಫಿ ತೆಗೆದುಕೊಳ್ಳುವ ಭಾಗ್ಯ ಲಭಿಸಿಲ್ಲ. ಮೊದಲಿಗೆ ಜಾಗ ಯಾವುದು? ಎಂಬ ಅನುಮಾನ ಇತ್ತು, ಆ ನಂತರ ಐ ಲವ್ ತೀರ್ಥಹಳ್ಳಿ ಬದಲಾಗಿ ನಮ್ಮ ತೀರ್ಥಹಳ್ಳಿ ಎಂಬುದಾಗಿ ಬದಲಾವಣೆ ಆಯ್ತು.  ಆದರೆ ಎಲ್ಲಾ ವ್ಯವಸ್ಥೆ ಆಗಿ ಟೆಂಡರ್ ಆದರೂ ಸಹ ಇಲ್ಲಿಯವರೆಗೆ ಸಾರ್ವಜನಿಕರಿಗೆ ಸೆಲ್ಫಿ ತೆಗೆದುಕೊಳ್ಳುವ ಶ್ರೇಯೋಭಿವೃದ್ಧಿ ದೊರಕಲಿಲ್ಲ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ..




Previous Post Next Post