ಐ ಲವ್ ತೀರ್ಥಹಳ್ಳಿ ಎಂಬ ನಾಮಫಲಕಕ್ಕೆ ಬ್ರೇಕ್ ಹಾಕಿದ್ಯಾರು? I love thirthahalli

ಐ ಲವ್ ತೀರ್ಥಹಳ್ಳಿ ಎಂಬ ನಾಮಫಲಕಕ್ಕೆ ಬ್ರೇಕ್ ಹಾಕಿದ್ಯಾರು?



ತೀರ್ಥಹಳ್ಳಿ : ಎಳ್ಳಮಾವಾಸ್ಯೆ ಜಾತ್ರೆಗೆ  ಈ ಬಾರಿ ಕುತೂಹಲ ಮೂಡಿಸಿದ್ದು ತೀರ್ಥಹಳ್ಳಿಯ ಹೆಸರು ಎಲ್ಲಡೆ ಕಾಣಿಸುವ ಸಲುವಾಗಿ ಐ ಲವ್ ತೀರ್ಥಹಳ್ಳಿ ಎಂಬ ನಾಮಫಲಕವನ್ನು ಅಳವಡಿಸಿ ಜಾತ್ರೆಗೆ ಮೆರಗು ತರಬಹುದು. ಜಾತ್ರೆಗೆ ಬರುವವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಹುದು ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬಂದಿತ್ತು.

ಇದನ್ನು ಓದಿ - ಐ ಲವ್ ತೀರ್ಥಹಳ್ಳಿ ಎಂಬ ನಾಮಫಲಕಕ್ಕೆ ಬ್ರೇಕ್ ಹಾಕಿದ್ಯಾರು?


ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ತೀರ್ಥಹಳ್ಳಿ ಹೆಸರನ್ನು ಎಲ್ಲಡೆ ಪಸರಿಸಲಿ ಎಂಬ ಹೊಸ ಆಲೋಚನೆಯೊಂದಿಗೆ ಈ ಪರಿಕಲ್ಪನೆಯನ್ನು ಮಾಡಿದ್ದರು. ಈ ವಿಚಾರವನ್ನು ಶಿವಮೊಗ್ಗ ಸುದ್ದಿ ವರದಿ ಸಹ ಮಾಡಿತ್ತು. ಜಾತ್ರೆಯಲ್ಲಿ ಈ ನಾಮಫಲಕ ಗಾಂಧಿಚೌಕದಲ್ಲಿ ಹಾಕಲಾಗುತ್ತದೆ ಎಂದು ಹೇಳಿ ನಂತರ ತುಂಗಾ ಕಾಮಾನು ಸೇತುವೆ ಬಳಿ ಹಾಕಲಾಗುತ್ತದೆ ಎಂದು ಹೇಳಲಾಗಿತ್ತು.

ಆದರೆ ದೇವರು ಕೊಟ್ಟರು ಪೂಜಾರಿ ಕೊಡುವುದಿಲ್ಲ ಎಂಬ ಗಾದೆ ಮಾತಿನಂತೆ ಪಟ್ಟಣ ಪಂಚಾಯತ್ ವತಿಯಿಂದ ನಾಮಫಲಕ ಅಳವಡಿಕೆಗೆ ಮುಹೂರ್ತ ಇಟ್ಟಿದ್ದರು, ಆದರೆ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬರು ನಾಮಫಲಕ ಅಳವಡಿಕೆಗೆ ಮೀನಾ ಮೇಷ ಎಣಿಸಿ, ಉದಾಸೀನದಿಂದ ನಿರ್ಲಕ್ಷ್ಯ ತೋರಿಸಿ ಐ ಲವ್ ತೀರ್ಥಹಳ್ಳಿ ಎಂಬ ನಾಮಫಲಕಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಎಷ್ಟೋ ಜನರ ಆಸೆಗೆ ತಣ್ಣೀರು ಎರಚಿದ್ದಾರೆ.  ಈ ಬಾರಿ ಎಷ್ಟೋ ಯುವಕ ಯುವತಿಯರು ನಾಮಫಲಕದ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದಿದ್ದರು. ಆದರೆ ಎಲ್ಲರೂ ನಿರಾಸೆಯಿಂದ ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕಿ ತೆರಳಿದ್ದಾರೆ.


Previous Post Next Post