ಬೆನ್ನಿಗೆ ಹಾಕುವ ಚೀಲಕ್ಕೆ ಕೊನೆಗೂ ಬೆನ್ನು ಸಿಗ್ತಾ..!?ಕೋಣೆ ಒಳಗೆ ಸೇರಿದ್ದ ಮಕ್ಕಳ ಬ್ಯಾಗ್ ಹೊರ ಬಂತು..! BIG IMPACT

ಬೆನ್ನಿಗೆ ಹಾಕುವ ಚೀಲಕ್ಕೆ ಕೊನೆಗೂ ಬೆನ್ನು ಸಿಗ್ತಾ..!?

ಕೋಣೆ ಒಳಗೆ ಸೇರಿದ್ದ ಮಕ್ಕಳ ಬ್ಯಾಗ್ ಹೊರ ಬಂತು..!

ಶಿವಮೊಗ್ಗ ಸುದ್ದಿ ವರದಿ ಫಲಶ್ರುತಿ..!



ತೀರ್ಥಹಳ್ಳಿ : ಶಿಕ್ಷಣ ಇಲಾಖೆಯಲ್ಲಿ ಹಲವು ಸಾಮಗ್ರಿಗಳು ವಿದ್ಯಾರ್ಥಿಗಳಿಗೆ ಕೊಟ್ಟರೆ ಉಳಿದವುಗಳ ಕಥೆ ಅಷ್ಟೇ ಎಂಬಂತ ಪರಿಸ್ಥಿತಿ ಉದ್ಭವವಾಗಿದ್ದು ಅಷ್ಟೇ ಅಲ್ಲದೆ ಕೆಲವು ದಾನಿಗಳು ನೀಡುವ ಎಷ್ಟೋ ಸಾಮಗ್ರಿಗಳು ಅಧಿಕಾರಿಗಳ ಕಪಿ ಮುಷ್ಟಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ವೇಳೆ ವಿದ್ಯಾರ್ಥಿಗಳು ಶಿಕ್ಷಣವನ್ನೇ ಮುಗಿಸಿರುತ್ತಾರೆ ಎಂಬುದಾಗಿ ಕಳೆದ ಹತ್ತು ದಿನಗಳ ಹಿಂದೆ ಬೆನ್ನಿಗೆ ಹಾಕುವ ಚೀಲ ಬೆನ್ನು ಬಾಗಿದ ಮೇಲೆ ಕೊಡ್ತಾರಾ!!? ಎಂಬ ಶೀರ್ಷಿಕೆ ಅಡಿಯಲ್ಲಿ ಶಿವಮೊಗ್ಗ ಸುದ್ದಿ ವರದಿ ಮಾಡಿತ್ತು.

ಜುಲೈ 5 ರಂದು ತೀರ್ಥಹಳ್ಳಿಯ ಬಿ ಆರ್ ಸಿ ಕೊಠಡಿಯೊಳಗೆ ಕಳೆದ ಒಂದು ವರ್ಷದಿಂದ ಕೋಣೆಯೊಳಗೆ ಸೇರಿರುವ ಮಕ್ಕಳಿಗೆ ಸಂಸದ ಬಿ ವೈ ರಾಘವೇಂದ್ರ ಅವರು ದಾನವಾಗಿ ನೀಡಿದ್ದ ಬ್ಯಾಗ್ ಅಧಿಕಾರಿಗಳು ಹಸ್ತಾಂತರ ಮಾಡಿಲ್ಲ.
ಸಂಸದರು ಕೊಟ್ಟ ಮಕ್ಕಳ ಶಾಲಾ ಬ್ಯಾಗ್ ದೂಳು ಹಿಡಿದು, ಮಳೆಗಾಲದಲ್ಲಿ ಚಂಡಿ ಹಿಡಿಯುವ ದೂರವಸ್ಥೆ ಆ ಕಟ್ಟಡದಲ್ಲಿ ಇದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ನೀಡುವ ಸೌಲಭ್ಯವನ್ನು ಏನು ಮಾಡುತ್ತಿದ್ದಾರೆ? ಎಂಬುದಾಗಿ ಶಿವಮೊಗ್ಗ ಸುದ್ದಿ ಪ್ರೆಶ್ನೆ ಮಾಡಿತ್ತು.


ಇದನ್ನು ಓದಿ - ಬೆನ್ನಿಗೆ ಹಾಕುವ ಚೀಲ ಬೆನ್ನು ಬಾಗಿದ ಮೇಲೆ ಕೊಡ್ತಾರಾ!!? ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್ ಕೋಣೆ ಒಳಗೆ ಸೇರಿದ್ದೇಕೆ..!?


ಈಗ ಆ ಪ್ರೆಶ್ನೆಗೆ ಉತ್ತರ ಸಿಕ್ಕಿದೆ. ಬರೋಬ್ಬರಿ ಒಂದು ವರ್ಷದ ನಂತರ ಮಕ್ಕಳ ಬೆನ್ನಿಗೆ ಚೀಲ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ. ದಿನಾಂಕ 18/07/25ನೇ ಶುಕ್ರವಾರ ದಂದು ಮಧ್ಯಾಹ್ನ 3 ಗಂಟೆಗೆ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಬ್ಯಾಗ್ ವಿತರಣೆಯನ್ನು ಸಂಸದ ಬಿ ವೈ ರಾಘವೇಂದ್ರ ಹಾಗೂ ಶಾಸಕ ಆರಗ ಜ್ಞಾನೇಂದ್ರ ವಿತರಣೆ ಮಾಡಲಿದ್ದಾರೆ.

ಎಲ್ಲಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಕಡ್ಡಾಯವಾಗಿ  ತಮ್ಮ ಶಾಲೆ ಮಕ್ಕಳ ಸಂಖ್ಯೆಯನ್ನು ತಂದು ಪಡೆದುಕೊಂಡು ಹೋಗಬೇಕು, ಮತ್ತು ಬರುವಾಗ ಎಸ್ ಡಿ ಎಂ ಸಿ ಅಧ್ಯಕ್ಷರ ಜೊತೆಗೆ ಬರಬೇಕು ಎಂಬುದಾಗಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೋಣೆಯೊಳಗೆ ದೂಳು ಹಿಡಿದು ಕುಳಿತು ಬ್ಯಾಗ್ ಗೆ ವಿಮೋಚನೆ ಸಿಕ್ಕಂತೆ ಕಾಣಿಸುತ್ತಿದೆ.








Previous Post Next Post