ಜೆ ಸಿ ಆಸ್ಪತ್ರೆ ವೈದ್ಯರನ್ನು ವರ್ಗಾವಣೆ ಮಾಡಿದ್ದಾಯ್ತು - ಉಳಿದ ಇಲಾಖೆಯ ಹಿರಿಯ ಅಧಿಕಾರಿಗಳ ವರ್ಗಾವಣೆ ಯಾವಾಗ!?
ರಾಜಕಾರಣಿಗಳಿಗೆ ಆಪ್ತರಾಗಿದ್ರೆ ಅವರು ವರ್ಗಾವಣೆ ಆಗೋಲ್ವಾ..!?
ತೀರ್ಥಹಳ್ಳಿ : ತಾಲೂಕಿನಲ್ಲಿ 10 ವರ್ಷಕ್ಕೂ ಅಧಿಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಜೆ ಸಿ ಆಸ್ಪತ್ರೆ ವೈದ್ಯರನ್ನು ವರ್ಗಾವಣೆ ಮಾಡಿರುವ ಸರ್ಕಾರ ಅದೇ ರೀತಿ ತೀರ್ಥಹಳ್ಳಿಯಲ್ಲಿ ಬೇರೆ ಬೇರೆ ಇಲಾಖೆಯಲ್ಲಿ 10 ವರ್ಷಕ್ಕೂ ಅಧಿಕ ವರ್ಷದಿಂದ ಇರುವ ಎಷ್ಟೋ ಅಧಿಕಾರಿಗಳು ಗೂಟ ಹೊಡೆದು ಕುಳಿತಿದ್ದು ಇಲ್ಲಿನ ಆಡಳಿತ ವ್ಯವಸ್ಥೆಯಲ್ಲಿ ನಮ್ಮದೇ ಸರ್ಕಾರ ಎಂಬಂತೆ ವರ್ತನೆ ಮಾಡುತ್ತಿದ್ದಾರೆ ಅಂತವರ ವರ್ಗಾವಣೆ ಯಾವಾಗ? ಎಂದು ಸಾರ್ವಜನಿಕರು ಪ್ರೆಶ್ನೆ ಮಾಡುತ್ತಿದ್ದಾರೆ..
ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ವೈದ್ಯರನ್ನು ಏಕಏಕಿ ವರ್ಗಾವಣೆ ಮಾಡಿದಂತೆ ಇನ್ನುಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅದರಲ್ಲೂ ತಾಲೂಕು ಪಂಚಾಯತ್, ತಾಲೂಕು ಕಛೇರಿ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಸೇರಿ ಹಲವು ಇಲಾಖೆಯಲ್ಲಿ ಗೂಟ ಹೊಡೆದು ಕುಳಿತು ಇಲ್ಲಿನ ಹಣದ ವ್ಯವಸ್ಥೆಯಿಂದ ರಾಜಾರೋಷವಾಗಿ ಬಡವರ ವಿರುದ್ಧ ದಬ್ಬಾಳಿಕೆ ಮಾಡುತ್ತಿರುವ ಅಧಿಕಾರಿಗಳಿಗೆ ಇಲ್ಲಿನ ಕೆಲವು ರಾಜಕಾರಣಿಗಳು ಸಾಥ್ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇಂತಹ ಸಂದರ್ಭದಲ್ಲಿ ಜೆ ಸಿ ಆಸ್ಪತ್ರೆಯಲ್ಲಿ ವೈದ್ಯರನ್ನು ವರ್ಗಾವಣೆ ಮಾಡಿದಂತೆ ಉಳಿದ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಮಾತು ಕೇಳಿ ಬಂದಿದೆ.
Tags:
ತೀರ್ಥಹಳ್ಳಿ ಸುದ್ದಿ