ಕುಪ್ಪಳ್ಳಿಯಲ್ಲಿ ಎಲ್ಲಿ ನೋಡಿದರೂ ಕಸದ ಮಯ - ಪ್ರವಾಸದ ಹೆಸರಲ್ಲಿ ಮೋಜು ಮಸ್ತಿ..! Kuppalli..

ಕುಪ್ಪಳ್ಳಿಯಲ್ಲಿ ಎಲ್ಲಿ ನೋಡಿದರೂ ಕಸದ ಮಯ - ಪ್ರವಾಸದ ಹೆಸರಲ್ಲಿ ಮೋಜು ಮಸ್ತಿ..!
ತೀರ್ಥಹಳ್ಳಿ : ರಾಷ್ಟ್ರ ಕವಿ ಕುವೆಂಪು ಅವರ ಹುಟ್ಟೂರು ಆಗಿರುವ ಕುಪ್ಪಳ್ಳಿಯಲ್ಲಿ ಇತ್ತೀಚಿಗೆ ಪ್ರವಾಸದ ಹೆಸರಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವುದಲ್ಲದೆ ತಿಂದು ಕುಡಿದು ಬೇಕಾಬಿಟ್ಟಿ ಕಸ ಮಾಡಿ ಹೋಗುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಪ್ಪಳ್ಳಿ ಬಸ್ ನಿಲ್ದಾಣದ ಬಳಿ ನೀರಿನ ಬಾಟಲ್, ಊಟ ಮಾಡಿದ ತಟ್ಟೆ, ಕವರ್ ಗಳು ಹೀಗೆ ಬೇಕಾಬಿಟ್ಟಿ ಕಸ ಮಾಡುತ್ತಿದ್ದು ಈ ಬಗ್ಗೆ ಕುವೆಂಪು ಪ್ರತಿಷ್ಠಾನ ಆಗಲಿ ಅಥವಾ ಸ್ಥಳೀಯ ಗ್ರಾಮಪಂಚಾಯಿತಿ ಆಗಲಿ ಸರಿಯಾದ ತೀರ್ಮಾನ ತೆಗೆದುಕೊಂಡಿಲ್ಲ. ಪ್ರವಾಸಿಗರ ಮೋಜು ಮಸ್ತಿ ಕಥೆಯಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಮನೆಗೆ ಕೆಟ್ಟ ಹೆಸರು ತರುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಈಗಾಗಲೇ ಶಿವಮೊಗ್ಗ ಸುದ್ದಿ ಅಲ್ಲಿ ಬರುವ ಪ್ರವಾಸಿಗರು ರೀಲ್ಸ್ ಮಾಡಿ ಕವಿ ಮನೆ ಹಾಗೂ ಸಮಾಧಿಯ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬುದಾಗಿ ವರದಿ ಮಾಡಿತ್ತು. ಈಗ ಸ್ಥಳೀಯರೇ ಪ್ರವಾಸಿಗರು ಕುವೆಂಪು ಮನೆಗೆ ಬಂದು ಅಲ್ಲಿನ
ಇತಿಹಾಸ ತಿಳಿಯುವುದನ್ನು ಬಿಟ್ಟು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಗಮನ ಹರಿಸಿ ಪ್ರವಾಸಿಗರ ಮೋಜು ಮಸ್ತಿಗೆ ಅವಕಾಶ ನೀಡದೆ ಅದಕ್ಕೊಂದು ಶಾಶ್ವತ ಪರಿಹಾರ ಮಾಡಬೇಕಿದೆ..





Previous Post Next Post