ಮೊಬೈಲ್ ಬಳಸುವುದಿಲ್ಲ - ನೋಡುವುದಿಲ್ಲ - ವಿದ್ಯಾರ್ಥಿಗಳಿಂದ ಪ್ರಮಾಣ Students

ಮೊಬೈಲ್ ಬಳಸುವುದಿಲ್ಲ - ನೋಡುವುದಿಲ್ಲ - ವಿದ್ಯಾರ್ಥಿಗಳಿಂದ ಪ್ರಮಾಣ 

ತೀರ್ಥಹಳ್ಳಿ : ಮೊಬೈಲ್ ಬಳಸುವುದಿಲ್ಲ - ಮೊಬೈಲ್ ನೋಡುವುದಿಲ್ಲ ಎಂಬುದಾಗಿ ಶಾಲಾ ವಿದ್ಯಾರ್ಥಿಗಳು ಪ್ರಮಾಣ ಮಾಡಿರುವ ಘಟನೆ ತೀರ್ಥಹಳ್ಳಿಯ ಶಾಲೆಯೊಂದರಲ್ಲಿ ನಡೆದಿದೆ.

ಪಟ್ಟಣದ ಸೀಬಿನಕೆರೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಇಂದು ಪ್ರಾರ್ಥನೆ ಮಾಡುವ ವೇಳೆ ಮೊಬೈಲ್ ನಿಂದ ಆಗುವ ಅನಾಹುತದ ಬಗ್ಗೆ ಮುಖ್ಯ ಶಿಕ್ಷಕರು ತಿಳಿಸಿದ ವೇಳೆ ತಕ್ಷಣವೇ  ನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ಇನ್ನು ಮುಂದೆ ಮೊಬೈಲ್ ಬಳಸುವುದಿಲ್ಲ - ನೋಡುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.

ಇತ್ತೀಚಿಗೆ ಮಕ್ಕಳು ಅತೀ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದು ಅದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮಕ್ಕಳ ತೀರ್ಮಾನ ಪೋಷಕರಿಗೆ ಖುಷಿ ತರಿಸಿದ್ದರು ಸಹ ಈ ಪ್ರಮಾಣ ಜಾರಿ ಆಗುತ್ತದೋ ಅಥವಾ ಪ್ರಾರ್ಥನೆ ಸಂದರ್ಭಕ್ಕೆ ಮಾತ್ರ ಸೀಮಿತವಾಗುತ್ತದೋ ಕಾದು ನೋಡಬೇಕಿದೆ..




Previous Post Next Post