ತೀರ್ಥಹಳ್ಳಿಗೆ ಒಬ್ಬರೇ ವೈದ್ಯ ಗಣೇಶ್ ಭಟ್..! Tth

ತೀರ್ಥಹಳ್ಳಿಗೆ ಒಬ್ಬರೇ ವೈದ್ಯ ಗಣೇಶ್ ಭಟ್..!

ಗಣೇಶ್ ಭಟ್ ವರ್ಗಾವಣೆಗೊಂಡರೆ ತೀರ್ಥಹಳ್ಳಿಯಲ್ಲೇ ಆಪರೇಷನ್ ಬಂದ್..!?
ತೀರ್ಥಹಳ್ಳಿ : ಜಯಚಾಮರಾಜೇಂದ್ರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾಗಿರುವ ಡಾ. ಗಣೇಶ್ ಭಟ್ ಅವರನ್ನು ವರ್ಗಾವಣೆ ಮಾಡಬೇಕೆಂದು ಸರ್ಕಾರ ಅದೇಶಿಸಿದ್ದು ಸರ್ಕಾರದ ವಿರುದ್ಧ ಜನಾಕ್ರೋಶ ಕೇಳಿ ಬಂದಿದೆ..

ಹೌದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಎಂಬುದನ್ನು ಹೊರತು ಪಡಿಸಿ ನೋಡಿದರೆ ಅವರೊಬ್ಬ ಅನಸ್ತೇಷಿಯ ವೈದ್ಯರಾಗಿದ್ದು ಅವರನ್ನು ವರ್ಗಾವಣೆ ಮಾಡಿದರೆ ಬರಿ ಸರ್ಕಾರಿ ಆಸ್ಪತ್ರೆಗಷ್ಟೇ ಅಲ್ಲದೆ ತೀರ್ಥಹಳ್ಳಿಗೆ ಸಮಸ್ಯೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಇಡೀ ತೀರ್ಥಹಳ್ಳಿಯಲ್ಲಿ ಅನಸ್ತೇಷಿಯ ವೈದ್ಯರು ಇಲ್ಲ. ಇರುವ ಓರ್ವ ವೈದ್ಯರನ್ನು ವರ್ಗಾವಣೆ ಮಾಡಿದರೆ ಆಪರೇಷನ್ ನಿಲ್ಲುವ ಪರಿಸ್ಥಿತಿ ಬರಬಹುದು.  

ಸರ್ಕಾರಿ ಆಸ್ಪತ್ರೆ ಅಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆಯಲ್ಲೂ ಆಪರೇಷನ್ ನಡೆಯುವ ಸಂದರ್ಭದಲ್ಲಿ ಅನಸ್ತೇಷಿಯ ನೀಡಲು ಗಣೇಶ್ ಭಟ್ ಹೋಗುತ್ತಿದ್ದರು. ಈಗ ಏಕಾಏಕಿ ಅವರನ್ನ ವರ್ಗಾವಣೆ ಮಾಡಲು ಹೊರಟಿರುವ ಸರ್ಕಾರಕ್ಕೆ ಸಂಪೂರ್ಣ ಮಂಡೆ ಪೆಟ್ಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣೇಶ್ ಭಟ್ ವರ್ಗಾವಣೆ ಆದರೆ ತೀರ್ಥಹಳ್ಳಿಯ ಎಲ್ಲಾ ಆಸ್ಪತ್ರೆಯಲ್ಲೂ ಆಪರೇಷನ್ ಬಂದ್ ಆಗುವ ಸಾಧ್ಯತೆ ಇದೆ. ಒಬ್ಬ ವೈದ್ಯರ ವರ್ಗಾವಣೆ 
ಇಡೀ ತೀರ್ಥಹಳ್ಳಿಗೆ ತಲೆ ನೋವು ತರುವ ಪರಿಸ್ಥಿತಿಗೆ ತಂದಿದೆ.

ಕೂಡಲೇ ಸರ್ಕಾರ ಗಣೇಶ್ ಭಟ್ ಅವರ ವರ್ಗಾವಣೆ ರದ್ದುಗೊಳಿಸಿ ತೀರ್ಥಹಳ್ಳಿ ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದೆ ಹೋದರೆ ಮುಂದೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Previous Post Next Post