ವೈದ್ಯರ ವರ್ಗಾವಣೆ ದಿಡೀರ್ ಆಸ್ಪತ್ರೆಗೆ ಭೇಟಿ ನೀಡಿದ ಆರಗ ಜ್ಞಾನೇಂದ್ರ Araga jnanendra

ವೈದ್ಯರ  ವರ್ಗಾವಣೆ ದಿಡೀರ್ ಆಸ್ಪತ್ರೆಗೆ ಭೇಟಿ ನೀಡಿದ ಆರಗ ಜ್ಞಾನೇಂದ್ರ

ಶಿವಮೊಗ್ಗ ಸುದ್ದಿ  ವರದಿ ಬೆನ್ನಲ್ಲೇ ಶಾಸಕರು ದೌಡು..!


ತೀರ್ಥಹಳ್ಳಿ : ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿಕೆಲಸ ನಿರ್ವಹಿಸುತ್ತಿದ್ದ ಆರು ಜನ ಪ್ರಮುಖ ವೈದ್ಯರನ್ನು ಸರ್ಕಾರ ವರ್ಗಾವಣೆ ಮಾಡುತ್ತಿರುವ ವಿಷಯದ ಬಗ್ಗೆ ಶಿವಮೊಗ್ಗ ಸುದ್ದಿ ವರದಿ ಮಾಡಿತ್ತು. ವರದಿ ಬೆನ್ನಲ್ಲೆ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರರವರು ಸೋಮವಾರ ಜೆಸಿ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿ ಮಾಹಿತಿ ಪಡೆದರು.


ಇದನ್ನು ಓದಿ - ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ವೈದ್ಯರ ವರ್ಗಾವಣೆ..!?


ಆಸ್ಪತ್ರೆಯಿಂದಲೇ ಆರೋಗ್ಯ ಇಲಾಖೆ ಕಮಿಷನರ್ ಹರ್ಷಗುಪ್ತರವರನ್ನು ದೂರವಾಣಿ ಮೂಲಕ ಸಂಪರ್ಕಿಸಿ
ಈ ಕೂಡಲೇ ಯಾವುದೇ ವರ್ಗಾವಣೆ ಕ್ರಮ ಕೈಗೊಳ್ಳದಂತೆ ತಿಳಿಸಿ ನರ್ಸ್ ಕೂಡ ಕಡಿಮೆ ಇದ್ದಾರೆ. ಇದ್ದ ನಾಲ್ವರು ಹಿರಿಯ ನರ್ಸ್ ಗಳು ವರ್ಗಾವಣೆ ಆದರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವವರು ಯಾರು? ವರ್ಗಾವಣೆ ಮಾಡುವುದರ ಬಗ್ಗೆ ನನ್ನ ಅಭ್ಯಂತರ ಇಲ್ಲ. ಆದರೆ ಆ ಜಾಗಕ್ಕೆ ಹಿರಿಯ ಅನುಭವಿ ನರ್ಸ್ ಗಳು ಸಿಗುವುದಿಲ್ಲ. ತುಂಬಾ ಸರ್ಜರಿ ನಡೆಯುವ ಸಂದರ್ಭದಲ್ಲಿ ಅನುಭವಿ ನರ್ಸ್ ಗಳು ಬೇಕಾಗುತ್ತದೆ. ಇಲ್ಲದಿದ್ದರೆ ವೈದ್ಯರು ಹೆದರುವ ಸಂಭವವಿದೆ. ಇತ್ತೀಚಿಗೆ ರಾಜ್ಯದಲ್ಲಿ ಬಾಣಂತಿಯರ ಸಾವು ಜಾಸ್ತಿಯಾಗುತ್ತಿದೆ. ಈ ರೀತಿ ಏಕಾಏಕಿ ವರ್ಗಾವಣೆ ಮಾಡಿದರೆ ಇನ್ನು ಜಾಸ್ತಿ ಆಗುತ್ತದೆ ಎಂದರು.


ಇದನ್ನು ಓದಿ - ತೀರ್ಥಹಳ್ಳಿಗೆ ಒಬ್ಬರೇ ವೈದ್ಯ ಗಣೇಶ್ ಭಟ್..! ಗಣೇಶ್ ಭಟ್ ವರ್ಗಾವಣೆಗೊಂಡರೆ ತೀರ್ಥಹಳ್ಳಿಯಲ್ಲೇ ಆಪರೇಷನ್ ಬಂದ್..!?


ತಿಂಗಳಿಗೆ ನೂರು ಡೆಲಿವರಿ ನಡೆಯುತ್ತಿದೆ. ನಿಮ್ಮ ವರ್ಗಾವಣೆ ಆದೇಶದಲ್ಲಿ ಅರವಳಿಕೆ ತಜ್ಞರನ್ನು ವರ್ಗಾವಣೆ ಮಾಡಲು ತಿಳಿಸಿದೆ. ಅವರು ವರ್ಗಾವಣೆಗೊಂಡರೆ ಡೆಲಿವರಿ ಮಾಡಲು ಸಹ ಆಗುವುದಿಲ್ಲ. ನೀವು ಈ ರೀತಿ ವೈದ್ಯರನ್ನು ವರ್ಗಾವಣೆ ಮಾಡಿದರೆ ಬಡವರಿಗೆ ಚಿಕಿತ್ಸೆ ಸಿಗುವುದಿಲ್ಲ. ನರ್ಸಿಂಗ್ ಹೋಂ ಹೋದರೆ ಹತ್ತಾರು ಸಾವಿರ ಹಣ ವ್ಯಹಿಸಬೇಕು. ಬೇರೆ ವೈದ್ಯರು, ನರ್ಸ್ ಗಳು ಈ ಆಸ್ಪತ್ರೆಗೆ ಬರುವ ತನಕ ಈಗ ಇರುವ ಯಾವುದೇ ವೈದ್ಯರನ್ನು, ನರ್ಸ್ ಗಳನ್ನು ವರ್ಗಾವಣೆ ಮಾಡಬಾರದು ಎಂದು ಹೇಳಿದರು.









Previous Post Next Post