ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ವೈದ್ಯರ ವರ್ಗಾವಣೆ..!J C Hospaital

ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ವೈದ್ಯರ ವರ್ಗಾವಣೆ..!

ಒಂದೇ ಬಾರಿ ಎಲ್ಲರಿಗೂ ಕೊಕ್ ಕೊಡುತ್ತಾ ಸರ್ಕಾರ..!?

ತೀರ್ಥಹಳ್ಳಿ : ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಾಗಿರುವ ಜಯ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಕಳೆದ ಎರಡು ದಶಕಗಳಿಂದ ಇದ್ದಂತಹ ವೈದ್ಯರನ್ನು ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು ಅದರಂತೆ ಆದರೆ ಐದಕ್ಕೂ ಹೆಚ್ಚು ವೈದ್ಯರು ವರ್ಗಾವಣೆ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಕಳೆದ ಎರಡು ದಶಕಗಳಿಂದ ಸುಧೀರ್ಘ ಕೆಲಸ ನಿರ್ವಹಿಸಿದ್ದ ವೈದ್ಯರುಗಳು ವರ್ಗಾವಣೆ ಆಗಿ ಆಸ್ಪತ್ರೆಗೆ ಹೊಸ ವೈದ್ಯರು ಬರುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ವರ್ಗಾವಣೆ ಕೆಲಸ ಸರ್ಕಾರ ಆರಂಭಿಸಿದ್ದು ಜುಲೈ 4 ರ ವರೆಗೆ ವರ್ಗಾವಣೆಗೊಳ್ಳುವ ವೈದ್ಯರ ಹೆಸರು ತಿಳಿದು ಬರಲಿದೆ. ಆದರೆ ಮೂಲಗಳ ಪ್ರಕಾರ ತೀರ್ಥಹಳ್ಳಿ ಆಸ್ಪತ್ರೆಯಲ್ಲಿದ್ದ ಐದಕ್ಕೂ ಹೆಚ್ಚು ವೈದ್ಯರು ವರ್ಗಾವಣೆ ಆಗುವ ಸಾಧ್ಯತೆ ಇದೆ.

ಕೆಲವು ವೈದ್ಯರು ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದರೆ ಉಳಿದ ಕೆಲವು ವೈದ್ಯರ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ಕೂಡ ಕೇಳಿ ಬಂದಿತ್ತು. ಈಗ ಒಮ್ಮೆಲೇ ಸರ್ಕಾರ ವರ್ಗಾವಣೆ ಮಾಡಲು ಹೊರಟಿದ್ದು ಯಾರಿಗೆ ತೀರ್ಥಹಳ್ಳಿಯ ನೀರಿನ ಯೋಗ ಇದೆ ಅಥವಾ ಇಲ್ಲವೋ ಎಂದು ಕಾಯಬೇಕಿದೆ..




Previous Post Next Post