ಗೌತಮಪುರದಲ್ಲಿ  ವೃದ್ದೆಯನ್ನು  ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹ*ಲ್ಲೆ  !! Anandapura

ಗೌತಮಪುರದಲ್ಲಿ  ವೃದ್ದೆಯನ್ನು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹ*ಲ್ಲೆ 

ಆನಂದಪುರ : ಸಮೀಪದ ಗೌತಮಪುರ ಗ್ರಾಮದಲ್ಲಿ  ಜೂನ್ 24ರಂದು  ಹುಚ್ಚಮ್ಮ ಎಂಬ 67 ವರ್ಷದ ವೃದ್ಧೆಯನ್ನು  ಸಣ್ಣದಾದ ಕಾರಣಕ್ಕೆ  ಮನೆಯ ಹಿಂಭಾಗದಲ್ಲಿನ  ಮರದ  ಕಂಬಕ್ಕೆ ಕಟ್ಟು ಹಾಕಿ ಪ್ರೇಮ ಎಂಬ ಮಹಿಳೆ  ಹಲ್ಲೆ ನಡೆಸಿದ್ದಾರೆ. 

ಹುಚ್ಚಮ್ಮ ಎಂಬುವರ ಮನೆಯ ಪಕ್ಕದ ವಾಸಿಯಾದ ಪ್ರೇಮ ಎಂಬ ಮಹಿಳೆಗೆ  ನಮ್ಮ  ಮನೆಯ ಮುಂಭಾಗ  ಕಸವನ್ನು ಹಾಕಬೇಡಿ ಎಂದು ಹೇಳಿದ ಸಣ್ಣ ಕಾರಣಕ್ಕೆ ವೃದ್ಧೆಯನ್ನು ಮನೆಯ ಹಿಂದೆ ಕರೆದು  ಕಂಬಕ್ಕೆ ಕಟ್ಟಿ ಮನಸ್ಸು ಇಚ್ಛೆ ಹಲ್ಲೆ ನಡೆಸಿದ್ದಾರೆ.  ಹುಚ್ಚಮ್ಮನ ಮಗ  ಬೆಳಗ್ಗೆ  ಬೆಂಗಳೂರಿಂದ ಬಂದಿದ್ದು ತನ್ನ ಸಂಬಂಧಿಕರೊಂದಿಗೆ ತಾಯಿ ಮಾಡಿಕೊಟ್ಟ ಟೀ ಕುಡಿಯುತ್ತಾ ಕುಳಿತಿರುವಾಗ ತಾಯಿ ಕೂಗುತ್ತಿರುವುದನ್ನು  ಆಲಿಸಿ ಮಗ  ಕನ್ನಪ್ಪ  ತಕ್ಷಣವೇ ಓಡಿ ಹೋಗಿ ನೋಡಿದಾಗ  ತನ್ನ ತಾಯಿಯನ್ನು  ಕಂಬಕ್ಕೆ ಕಟ್ಟಿಹಾಕಿ  ಪ್ರೇಮ ಎಂಬುವರು  ಹಲ್ಲೆ ನಡೆಸುತ್ತಿದ್ದರು. 

ಮಗ ಕಂಬಕ್ಕೆ ಕಟ್ಟು ಹಾಕಿದ ತಾಯಿಯನ್ನು ಬಿಡಿಸಿಕೊಂಡು ಬಂದಿದ್ದಾರೆ. ವೃದ್ದೆಯ  ಮೇಲೆ ಹಲ್ಲೆ ನಡೆದ ವಿಚಾರವನ್ನು ಕನ್ನಪ್ಪ   ಗ್ರಾಮದ ಹಿರಿಯರಿಗೆ ತಿಳಿಸಲಾಗಿದ್ದು ಯಾರು  ನ್ಯಾಯ ಕೊಡಿಸಲು ಮುಂದಾಗಲಿಲ್ಲ. ವೃದ್ದೆಯ ಮಗ ಕನ್ನಪ್ಪ ತಾಯಿಯೊಂದಿಗೆ  ಆನಂದಪುರ ಪೊಲೀಸ್ ಠಾಣೆಗೆ ತೆರಳಿ ಹಲ್ಲೆ ಮಾಡಿದ  ಪ್ರೇಮ, ಹಲ್ಲೆಗೆ ಉತ್ತೇಜನ ನೀಡಿದ  ಮಂಜುನಾಥ್, ದರ್ಶನ್ ಎಂಬುವರ ವಿರುದ್ಧ ದೂರು ನೀಡಿದ್ದಾರೆ. 

ಕನ್ನಪ್ಪ  ಪೊಲೀಸ್ ಠಾಣೆಗೆ ದೂರು ನೀಡಿದ ನಂತರ  ಪತ್ರಕರ್ತರೊಂದಿಗೆ  ಮಾತನಾಡಿ ಹಲ್ಲೆಗೊಳಗಾದ ನನ್ನ ತಾಯಿ ತೀವ್ರ ನೋವಿನಿಂದ ನೆರಳುತ್ತಿದ್ದರು. ಅವರನ್ನು  ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಲ್ಲಿ ದಾಖಲಿಸಿ  ಚಿಕಿತ್ಸೆ ಕೊಡಿಸಿದ್ದೇನೆ. ವಯಸ್ಸಾದ ನನ್ನ ತಂದೆ ತಾಯಿಗೆ  ಪ್ರಾಣಭಯವಿದ್ದು  ಪೊಲೀಸ್ ಅಧಿಕಾರಿಗಳು ರಕ್ಷಣೆ ನೀಡುವಂತೆ ತಿಳಿಸಿದ್ದಾರೆ.  ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು ಪ್ರೇಮ ಎಂಬುವರನ್ನು  ಪೊಲೀಸರು ಬಂಧಿಸಿದ್ದಾರೆ.  



Previous Post Next Post