ಬಸ್ ನಲ್ಲೆ ಹೃದಯಾಘಾತ - ಆಗುಂಬೆ ಘಾಟಿಯಲ್ಲಿ ನಡೆದ ಘಟನೆ ! ನಂತರ ಆಗಿದ್ದೇನು? Tth

ಬಸ್ ನಲ್ಲೆ ಹೃದಯಾಘಾತ - ಆಗುಂಬೆ ಬಸ್ ನಲ್ಲೆ ಹೃದಯಾಘಾತ - ಆಗುಂಬೆ ಘಾಟಿಯಲ್ಲಿ ನಡೆದ ಘಟನೆ ! ನಂತರ ಆಗಿದ್ದೇನು?



ತೀರ್ಥಹಳ್ಳಿ: ಪರ್ಕಳದಿಂದ ತೀರ್ಥಹಳ್ಳಿ ಮಾರ್ಗವಾಗಿ ಕೊಪ್ಪಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ನಲ್ಲೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಇಂದು ನಡೆದಿದೆ.


ಬಸ್ ನಲ್ಲಿ ಆಗಮಿಸುತ್ತಿದ್ದ ಕೊಪ್ಪದ ಹರೀಶ್ ಬಳ್ಳಾಲ್ ಎನ್ನುವವರಿಗೆ ತೀವ್ರ ಹೃದಯಘಾತ ಆಗಿದೆ. ವಿಷಯ ತಿಳಿಯುತ್ತಿದ್ದಂತೆ ಬಸ್ ಡ್ರೈವರ್ 

ಪ್ರಾಥಮಿಕ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಹರೀಶ್ ಪ್ರಾಣ ಬಿಟ್ಟಿದ್ದಾರೆ. ಆಗುಂಬೆ ವೈದ್ಯಾಧಿಕಾರಿಯಾದ ಅನಿಕೇತನ್ ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.


ನಂತರ ಆಗುಂಬೆಯ ಲಯನ್ಸ್ ಕ್ಲಬ್ ಆಂಬುಲೆನ್ಸ್ ಗೆ ಬಳ್ಳಾಳ್ ಅವರ ಮೃತದೇಹವನ್ನು ಶಿಫ್ಟ್ ಮಾಡಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತೊಂದರೆ ಆಗದಂತೆ ಬಸ್ಸನ್ನು ಕಳಿಸಿ ಕೊಟ್ಟಿರುತ್ತಾರೆ ಎಂದು ತಿಳಿದು ಬಂದಿದೆ.

Previous Post Next Post