ಮಾದರಿ ಪಟ್ಟಣ ಪಂಚಾಯತ್ ಮಾಡುವತ್ತ ಹೆಜ್ಜೆ ಇಟ್ಟ ರಹಮತ್ ಉಲ್ಲಾ ಅಸಾದಿ muncipal

ಮಾದರಿ ಪಟ್ಟಣ ಪಂಚಾಯತ್ ಮಾಡುವತ್ತ ಹೆಜ್ಜೆ ಇಟ್ಟ ರಹಮತ್ ಉಲ್ಲಾ ಅಸಾದಿ 



ತೀರ್ಥಹಳ್ಳಿ : ಈ ದಿನ ನಮ್ಮ ಭಾರತೀಯರಿಗೆಲ್ಲಾ ಹೆಮ್ಮೆಯ ದಿನ.ದೇಶವನ್ನು ಒಕ್ಕೂಟದ ಆಧಾರದ ಮೇಲೆ ಗಣರಾಜ್ಯವನ್ನು ಸ್ಥಾಪಿಸಿದ ದಿನ.ಸಂವಿಧಾನವನ್ನು ಸಮರ್ಪಸಿಕೊಂಡು ನಮ್ಮನ್ನು ನಾವು ಅರ್ಪಿಸಿಕೊಂಡ ದಿನ ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ತಿಳಿಸಿದರು.


ಭಾನುವಾರ ಗಣರಾಜ್ಯೋತ್ಸವದ ಅಂಗವಾಗಿ ಪಟ್ಟಣ ಪಂಚಾಯತ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಪಟ್ಟಣ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಯುನಿಫಾರಂ ಹಾಗೂ ಗುರುತಿನ ಕಾರ್ಡ್ ನೀಡಿ ಮಾತನಾಡಿದರು.

ತೀರ್ಥಹಳ್ಳಿಯ ಪಟ್ಟಣ ಪಂಚಾಯತ್ ಅನ್ನು ಮಾದರಿ ಪಟ್ಟಣ ಪಂಚಾಯತ್ ಮಾಡುವ ದೃಷ್ಟಿಕೋನ ಇಟ್ಟುಕೊಂಡು ಈ ರೀತಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪಟ್ಟಣ ಶೇ 70 ರಷ್ಟು ಸ್ವಚ್ಛತೆ ಇದ್ದು ಶೇ 30 ರಷ್ಟು ಸಮಸ್ಯೆ ಆಗಿರಬಹುದು ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದರು.


ನಾವೇ ಸೃಷ್ಟಿ ಮಾಡಿದ ಕಸವನ್ನು ಒಂದು ದಿನ ಇಟ್ಟುಕೊಳ್ಳಲು ನಾವು ರೆಡಿ ಇರುವುದಿಲ್ಲ. ಹಾಗಿಲ್ಲ ಹೀಗಿಲ್ಲ, ಗಾಡಿ ಬಂದಿಲ್ಲ ಎಂಬ ಕೂಗು ಕೇಳಿ ಬರುತ್ತದೆ. ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎಂಬುದನ್ನು ನೋಡದೆ ಪಟ್ಟಣದ ಸ್ವಚ್ಛತೆಗೆ ಶ್ರಮಿಸುವವರು ಪೌರ ಕಾರ್ಮಿಕರು. ಕೆಲವು ಬಾರಿ ಕಂಪ್ಲೇಂಟ್ ಹಾಗೆ ಕೆಲವು ಬಾರಿ ಹೊಗಳಿಕೆ ಮಾತು ಕೇಳಿ ಬರುತ್ತದೆ. ಆದಷ್ಟು ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಮಾದರಿ ಪಟ್ಟಣ ಪಂಚಾಯತ್ ಮಾಡುವತ್ತ ಹೆಜ್ಜೆ ಇಡಬೇಕಿದೆ ಎಂದರು.

ಈ ವೇಳೆ ಮುಖ್ಯಾಧಿಕಾರಿ ನಾಗರಾಜ್, ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಸುಶೀಲ ಶೆಟ್ಟಿ,  ಮಂಜುಳಾ ನಾಗೇಂದ್ರ, ಜ್ಯೋತಿ ಮೋಹನ್, ರತ್ನಾಕರ್ ಶೆಟ್ಟಿ, ಅನಿಲ್ ಸೇರಿ ಹಲವರು ಉಪಸ್ಥಿತರಿದ್ದರು.


Previous Post Next Post