ಮ್ಯಾಕ್ಸ್‌ ಮಂಜುಗೆ ಬಿಗ್ ಶಾಕ್.. ಬಿಗ್ ಬಾಸ್ ಫಿನಾಲೆಯಿಂದ ಮೊದಲ ಕಿಕ್ ಔಟ್‌! Bigg boss

 ಮ್ಯಾಕ್ಸ್‌ ಮಂಜುಗೆ ಬಿಗ್ ಶಾಕ್.. ಬಿಗ್ ಬಾಸ್ ಫಿನಾಲೆಯಿಂದ ಮೊದಲ ಕಿಕ್ ಔಟ್‌!



ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದೇ ಹೊತ್ತಲ್ಲಿ ಟಾಪ್​ 5 ಸ್ಥಾನದಲ್ಲಿದ್ದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಿಗ್​ಬಾಸ್​ ಮನೆಯಿಂದ ಆಚೆ ಬರುತ್ತಿದ್ದಾರೆ. ಇದೀಗ ಬಿಗ್​ಬಾಸ್​ ಮನೆಯಿಂದ 4ನೇ ರನ್ನರ್ ಅಪ್​ ಉಗ್ರಂ ಮಂಜು ಆಚೆ ಬಂದಿದ್ದಾರೆ.  ​


ಹೌದು, ಬಿಗ್​ಬಾಸ್​ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದ್ದು, ಫಿನಾಲೆಗೆ ಬಂದ 6 ಜನರ ಪೈಕಿ ಭವ್ಯ ಗೌಡ ನಿನ್ನೆಯ ಸಂಚಿಕೆಯಲ್ಲಿ ಎಲಿಮಿನೇಟ್‌ ಆಗಿದ್ದರು. ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ಐದು ಸ್ಪರ್ಧಿಗಳು ಉಳಿದುಕೊಂಡಿದ್ದರು. ಅದರಲ್ಲಿ ಮೋಕ್ಷಿತಾ ಪೈ, ತ್ರಿವಿಕ್ರಮ್‌, ಉಗ್ರಂ ಮಂಜು, ಹನುಮಂತ ಹಾಗೂ ರಜತ್‌ ಟಾಪ್‌ 5 ಸ್ಪರ್ಧಿಗಳಾಗಿ ಹೊರ ಹೊಮ್ಮಿದ್ದರು.


ಇದೀಗ ಅಚ್ಚರಿ ಎಂಬಂತೆ 119ನೇ ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದ ಮ್ಯಾಕ್ಸ್ ಮಂಜು ಕೊನೆಯ ಕ್ಷಣದಲ್ಲಿ ಆಚೆ ಬಂದಿದ್ದಾರೆ. ಹೀಗಾಗಿ ನಾಲ್ಕನೇ ರನ್ನರ್‌ ಅಪ್‌ ಆಗಿ ಉಗ್ರಂ ಮಂಜು ಬಿಗ್​ಬಾಸ್‌ ಮನೆಯಿಂದ ಹೊರಬಂದಿದ್ದಾರೆ. ಇನ್ನೂ, ಉಗ್ರಂ ಮಂಜು ಒಬ್ಬ ಬಲಿಷ್ಠ ಬಿಗ್‌ ಬಾಸ್‌ ಸ್ಪರ್ಧಿಗೆ ಇರಬೇಕಾದಂತಹ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಉಗ್ರಂ ಬಿಗ್​ಬಾಸ್​ ಶುರುವಾರದ ಆರಂಭದಲ್ಲಿಯೇ ಪಕ್ಕಾ ಫಿನಾಲೆ ಸ್ಪರ್ಧಿ ಎಂದು ವೀಕ್ಷಕರು ಗುರುತಿಸಿಕೊಂಡಿದ್ದರು.


ಉಗ್ರಂ ಮಂಜು ಮಾತಿಗೆ ಎದುರು ಉತ್ತರ ಕೊಡೋದಕ್ಕೆ ಯಾರು ಇರುತ್ತಿರಲಿಲ್ಲ. ಅಲ್ಲದೇ ಬಿಗ್​ಬಾಸ್​ ಕೊಡುವ ಪ್ರತಿ ಟಾಸ್ಕ್​ನಲ್ಲೂ ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತಿದ್ದರು ಉಗ್ರಂ ಮಂಜು. ಇಷ್ಟೇ ಅಲ್ಲದೇ ಗ್ರೇ ಏರಿಯಾ ಕಿಂಗ್‌ ಅಂತಾ ಕೂಡ ಕರೆಸಿಕೊಂಡರು. ಇದಾದ ಬಳಿಕ ಬಿಗ್​ಬಾಸ್‌ ಮನೆಯ ಕ್ಯಾಪ್ಟನ್‌ ಆಗಿದ್ದ ಉಗ್ರಂ ಮಂಜು ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದರು.


ಆದ್ರೆ, ಕಳೆದ ಕೆಲವು ವಾರದಿಂದ ಉಗ್ರಂ ಮಂಜು ಡಲ್​ ಆಗಿದ್ದರು. ಪ್ರತಿ ಸಾರಿಯೂ ಕಿಚ್ಚ ಸುದೀಪ್‌ ಅವರು ಮಂಜುಗೆ ಬುದ್ಧಿ ಮಾತು ಹೇಳಿ ಬದಲಾಗಿ ಅಂತ ಹೇಳಿದ್ದರು. ಆದ್ರೂ ಕೂಡ ಉಗ್ರಂ ಮಂಜು ಅವರಲ್ಲಿ ಬದಲಾವಣೆ ಕಾಣಿಸಲೇ ಇಲ್ಲ. 


ಸದ್ಯ ಈಗ ರಜತ್, ತ್ರಿವಿಕ್ರಮ್​, ಮೋಕ್ಷಿತಾ ಪೈ ಹಾಗೂ ಹನುಮಂತ ಉಳಿದುಕೊಂಡಿದ್ದಾರೆ. ಈ ನಾಲ್ಕು ಜನರಲ್ಲಿ ಈ ಬಾರಿಯ ಬಿಗ್​ಬಾಸ್​ ಟ್ರೋಫಿ ಯಾರ ಕೈಗೆ ಸೇರಲಿದೆ ಅಂತ ಇನ್ನೂ ಕೆಲವೇ ಗಂಟೆಗಳಲ್ಲಿ ತಿಳಿದು ಬರಲಿದೆ. ಹೀಗಾಗಿ ವೀಕ್ಷಕರ ಚಿತ್ತ ಬಿಗ್​ಬಾಸ್​ ಟ್ರೋಫಿ ಮೇಲಿದೆ.

Previous Post Next Post