ಪಟ್ಟಣ ಪಂಚಾಯತ್ ಬಜೆಟ್ ನ ಪೂರ್ವಭಾವಿ ಸಭೆಯಲ್ಲಿ ಆಗಿದ್ದೇನು?
ತೀರ್ಥಹಳ್ಳಿ : ಪಟ್ಟಣ ಪಂಚಾಯತ್ 2025 ನೇ ವರ್ಷದ ಬಜೆಟ್ ಸಂಬಂಧ ಪೂರ್ವಭಾವಿ ಸಭೆಯನ್ನು ಮಾಡಲಾಗಿದ್ದು ಹಲವಾರು ವಿಚಾರಗಳು ಚರ್ಚೆಯಾದವು. ಅದರಲ್ಲಿ ಕೆಲವೊಂದು ಪ್ರತಿ ಬಾರಿ ಕೆಲವು ವಿಷಯ ಪ್ರಸ್ತಾಪ ಆಗುತ್ತಿದ್ದು ಈ ಬಾರಿ ಎಷ್ಟು ಕೆಲಸಗಳು ಅಭಿವೃದ್ಧಿಯಾಗಿ ಪರಿವರ್ತನೆ ಆಗುತ್ತದೆ ಕಾದು ನೋಡಬೇಕಿದೆ.
ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಟ್ಟಣದಲ್ಲಿರುವ ಶೌಚಾಲಯಗಳು ಸಂಪೂರ್ಣ ಹಾಳಾಗಿದೆ. ಇದರ ಬಗ್ಗೆ ಯಾರು ಗಮನವಹಿಸಿಲ್ಲ.
ಈಗಾಗಲೇ ಜಾತ್ರೆ ಸಹ ಮುಗಿಯಿತು. ಆದರೂ ಕೂಡ ಯಾರು ಅದರ ಬಗ್ಗೆ ಗಮನವಹಿಸಿಲ್ಲ ಎಂಬ ಮಾತು ಕೇಳಿ ಬಂತು. ನಂತರ ವಾಹನ ನಿಲುಗಡೆಗೆ ಸರಿಯಾಗಿ ಸ್ಥಳ ಮಾಡಬೇಕು. ಒಂದೆಡೆ ವಾಹನಗಳು ನಿಂತರೆ ಟ್ರಾಫಿಕ್ ಜಾಮ್ ಆಗುತ್ತದೆ. ಅಂತಹ ಪರಿಸ್ಥಿತಿ ಪಟ್ಟಣದಲ್ಲಿ ಇದೆ ಹಾಗಾಗಿ ವಾಹನ ನಿಲುಗಡೆಗೆ ಒಂದು ಸೂಕ್ತ ಜಾಗ ನಿರ್ಮಾಣ ಮಾಡಬೇಕು ಎಂದು ಹೇಳಲಾಯಿತು.
ಈಗಾಗಲೇ ತುಂಗಾ ನದಿಯಿಂದ ಛತ್ರಕೇರಿ ಮೂಲಕ ಪಟ್ಟಣ ಸೇರಲು ಹೊಸ ರಸ್ತೆ ನಿರ್ಮಿಸಿದ್ದು ಆ ರಸ್ತೆಗೆ ಕಾಂಕ್ರೆಟ್ ಹಾಕಬೇಕು, ಅಷ್ಟೇ ಅಲ್ಲದೆ ಪಟ್ಟಣದಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದರು. ರಸ್ತೆ ಮಧ್ಯದ ಡಿವೈಡರ್ ನಲ್ಲಿ ಗಿಡಗಳನ್ನು ಹಾಕಲಾಗಿತ್ತು ಅದೆಲ್ಲವೂ ಮಾಯವಾಗಿದೆ, ಪ್ರತಿಯೊಬ್ಬರ ಅಂಗಡಿ ಮುಂಭಾಗ ಕಬ್ಬಿಣದ ಗ್ರಿಲ್ ಗಳನ್ನು ಕಟ್ ಮಾಡುವುದು ಅದೆಲ್ಲವೂ ಸರಿ ಪಡಿಸಬೇಕಿದೆ ಎಂದರು.
ಪಟ್ಟಣ ಪಂಚಾಯತ್ ಗೆ ಸಂಬಂಧಪಟ್ಟಂತೆ ಕೆಲವೊಂದು ಮಳಿಗೆಗಳು ಶೀತಿಲವಾಗಿದೆ. ಅದನ್ನು ಸರಿಪಡಿಸಬೇಕು.ಬೀದಿ ಬದಿ ವ್ಯಾಪಾರಿಗಳಿಗೆ ಒಂದು ಜಾಗದ ವ್ಯವಸ್ಥೆ ಮಾಡಬೇಕು, ಹೋಟೆಲ್ ನವರು ಟ್ಯಾಕ್ಸ್ ಕಟ್ಟುತ್ತಾರೆ. ಆದರೆ ಹೋಟೆಲ್ ಎದುರಿಗೆ ಗಾಡಿಗಳಲ್ಲಿ ತಿಂಡಿ ಊಟ ಕೊಡಲಾಗುತ್ತದೆ. ಅವರಿಗಾಗಿ ಒಂದು ಜಾಗ ನಿರ್ಮಾಣ ಮಾಡಬೇಕು ಇಲ್ಲ ಎಂದರೆ ವರ್ತಕರು ಬೀದಿಗೆ ಬರಬೇಕು. ಇನ್ನು ಕುಶಾವತಿ ಪಾರ್ಕ್ ನಲ್ಲಿ ಭವನ ನಿರ್ಮಾಣ ಮಾಡಬೇಕು. ದಸರಾ ಸಂದರ್ಭದಲ್ಲಿ ಅಲ್ಲಿ ಅನುಕೂಲ ಆಗುತ್ತದೆ ಎಂದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಮಾತನಾಡಿ ಪಟ್ಟಣ ಪಂಚಾಯತ್ ಅನುಮತಿ ತೆಗೆದುಕೊಂಡು ಗ್ರಿಲ್ ಗಳನ್ನು ಕಟ್ ಮಾಡುತ್ತಿಲ್ಲ, ಪ್ರತಿಯೊಂದು ಅಂಗಡಿ ಮುಂದೆ ಗ್ರಿಲ್ ಕಟ್ ಮಾಡುವುದಾದರೆ ಗ್ರಿಲ್ ಅವಶ್ಯಕತೆ ಇಲ್ಲ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಆಧಿಕಾರಿಗಳ ಬಳಿ ಮಾತನಾಡಿದ್ದೇನೆ. ವರ್ತಕರ ಜೊತೆಗೆ ಇನ್ನೊಂದು ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದರು.
ಛತ್ರಕೇರಿ ರಸ್ತೆಗೆ ಈಗಾಗಲೇ ಹಲವು ಅನುಮೋದನೆಗಳು ಪ್ರಸ್ತಾಪ ಆಗಿದ್ದು ರಸ್ತೆ ಅಭಿವೃದ್ಧಿ ಆಗುತ್ತದೆ. ಬೀದಿ ಬದಿ ವ್ಯಾಪಾರಿಗಳಿಗೆ ಈಗಾಗಲೇ ಜಾಗ ನಿಗದಿ ಆಗಿದೆ ಆದರೆ ಸರಿ ಆಗುತ್ತಿಲ್ಲ. ಅದಕ್ಕೆ ಖಂಡಿತವಾಗಿ ಒಳ್ಳೆ ಜಾಗ ನಿಗದಿ ಪಡಿಸುತ್ತೇವೆ. ವಾಹನ ನಿಲುಗಡೆಗೂ ಪೊಲೀಸ್ ಹಾಗೂ ಇತರ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಒಟ್ಟಿನಲ್ಲಿ ಈ ಬಾರಿಯ ಬಜೆಟ್ ಪೂರ್ವಭಾವಿಯ ಸಭೆಯ ಕೆಲವು ವಿಚಾರಗಳು ಯಾವೆಲ್ಲಾ ಬಜೆಟ್ ನಲ್ಲಿ ಇರಲಿದೆ ಕಾದು ನೋಡಬೇಕಿದೆ
