ಜೆ. ಸಿ ಆಸ್ಪತ್ರೆಗೆ ಎಂಟು ಲಕ್ಷ ಮೌಲ್ಯದ ಲಾಂಡ್ರಿ ಯಂತ್ರವನ್ನು ಕೊಡುಗೆಯಾಗಿ ನೀಡಿದ ಡಾ. ಜಗದೀಶ್ j c Hospaital

 ಜೆ. ಸಿ ಆಸ್ಪತ್ರೆಗೆ ಎಂಟು ಲಕ್ಷ ಮೌಲ್ಯದ ಲಾಂಡ್ರಿ ಯಂತ್ರವನ್ನು ಕೊಡುಗೆಯಾಗಿ ನೀಡಿದ ಡಾ. ಜಗದೀಶ್ 



ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಪತ್ರಿಕಾ ಕೆಲಸವನ್ನು ಮಾಡಿಕೊಂಡಿದ್ದ ರಾಮಕೃಷ್ಣ ಅವರ ಕುಟುಂಬದವರು ಇವತ್ತು ಆಸ್ಪತ್ರೆಗೆ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ. ಉಳ್ಳವರು ಬಹಳಷ್ಟು ಜನರು ಇದ್ದಾರೆ. ಆದರೆ ಅದನ್ನು ಕೊಡುವವರು ಬಹಳಷ್ಟು ಕಡಿಮೆ. ಈ ರೀತಿಯ ಕೆಲಸದಿಂದ ಎಷ್ಟೋ ಜನರಿಗೆ ಅನುಕೂಲ ಆಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.


ಜಯಚಾಮರಾಜೇಂದ್ರ ಆಸ್ಪತ್ರೆಗೆ ಓಂಕಾರ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನಲ್ಲಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಜಗದೀಶ್ ಮತ್ತು ಅವರ ಕುಟುಂಬ ಎಂಟು ಲಕ್ಷ ಮೊತ್ತದ ಲಾಂಡ್ರಿ ಯಂತ್ರವನ್ನು ಕೊಡುಗೆಯಾಗಿ ನೀಡಿದರು. ಈ ವೇಳೆ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.


ಈ ರೀತಿ ಕೊಡುಗೆ ಕೊಡುವ ಸಂಸ್ಕೃತಿ ಸಂಸ್ಕಾರ ಎಲ್ಲರಿಗೂ ಬರುವುದಿಲ್ಲ. ರಾಮಕೃಷ್ಣ ಅವರ ಪುತ್ರರು ಓಂಕಾರ ಎಂಬ ಟ್ರಸ್ಟ್ ಮಾಡಿಕೊಂಡು ಈ ರೀತಿ ಕೊಡುಗೆ ಕೊಡುತ್ತಿರುವುದು ನಿಜವಾಗಿಯು ಖುಷಿ ಆಗುತ್ತದೆ. ಅವರ ಕುಟುಂಬಕ್ಕೆ ದೇವರು ಸಹ ಸಕಲ ಸೌಭಾಗ್ಯ ನೀಡಲಿ. ಇಂತಹ ಕೊಡುಗೆ ಕೊಡುವುದಕ್ಕೆ ಎಷ್ಟೋ ಜನರಿಗೆ ಇವರು ಸ್ಫೂರ್ತಿ ಆಗಿದ್ದಾರೆ. ಒಳ್ಳೊಳ್ಳೆ ಕೆಲಸವನ್ನು ಈ ಟ್ರಸ್ಟ್ ಕಡೆಯಿಂದ ನಡೆಯಲಿ ಎಂದು ಹಾರೈಸಿದರು.


ಕಿಮ್ಮನೆ ರತ್ನಾಕರ್ ಮಾತನಾಡಿ ಈ ದೇಶದಲ್ಲಿ ದುಡ್ಡೇ ದೊಡ್ಡಪ್ಪ ಎನ್ನುವವರ ಮಧ್ಯೆ, ತಾವು ದುಡಿದ ಸಂಪಾದನೆಯಲ್ಲಿ ಸಾರ್ವಜನಿಕರಿಗೆ ಬಡವರಿಗೆ ಅನುಕೂಲ ಆಗಲಿ ಎಂದು ಶ್ರಮಿಸುವ ಇಂತವರು ಬಹಳ ಕಡಿಮೆ. ಈ ರೀತಿಯ ಆಲೋಚನೆ ಎಲ್ಲರಲ್ಲೂ ಬರುವುದಿಲ್ಲ. ನಿಮಗೆ ನಮ್ಮಿಂದ ಏನೇ ಸಹಾಯ ಬೇಕಾದರೂ ನಾವು ನಿಮ್ಮ ಜೊತೆಗೆ ಇರಲಿದ್ದೇವೆ ಎಂದರು.


ಈ ಸಂದರ್ಭದಲ್ಲಿ ಸುಧಾಕರ್ ಪ್ರಭು, ವೆಂಕಟೇಶ್, ಜಗದೀಶ್, ಶ್ರೀನಿವಾಸ್, ಡಾ. ಗಣೇಶ್ ಭಟ್ ಸೇರಿ ಹಲವರು ಉಪಸ್ಥಿತರಿದ್ದರು.

Previous Post Next Post