ತೀರ್ಥಹಳ್ಳಿಯಲ್ಲಿ ಅಪ್ರಾಪ್ತನಿಂದ ವಾಹನ ಚಲಾವಣೆ - ಪೋಷಕರಿಗೆ ಬಿದ್ದ ದಂಡ ಎಷ್ಟು ಗೊತ್ತಾ?
ತೀರ್ಥಹಳ್ಳಿ : ಅಪ್ರಾಪ್ತ ಯುವಕನೋರ್ವ ಬೈಕ್ ಚಲಾವಣೆ ಮಾಡಿದ್ದು ಆತನ ಪೋಷಕರಿಗೆ ದಂಡ ವಿಧಿಸಿ ಎಂದು ಜೆ ಎಂ ಎಫ್ ಸಿ ಆದೇಶ ನೀಡಿದೆ.
ಬಾಳೆಬೈಲಿನ ಅಪ್ರಾಪ್ತ ಯುವಕನೋರ್ವ ತೀರ್ಥಹಳ್ಳಿಗೆ ಬೈಕ್ ಚಲಾಯಿಸಿಕೊಂಡು ಬಂದಿದ್ದು ಆತನನ್ನು ಛತ್ರಕೇರಿ ಬಳಿ ಪೊಲೀಸರು ಹಿಡಿದು ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದು ಅಪ್ರಾಪ್ತ ಯುವಕನ ಪೋಷಕರಿಗೆ 25,000 ದಂಡವನ್ನು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ವಿಧಿಸಿರುತ್ತಾರೆ ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
