ಬಿಗ್ಬಾಸ್ ಮನೆಯಿಂದ ಆಚೆ ಬಂದ ಭವ್ಯ ಗೌಡ!
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇಂದು ಸಂಜೆ 6 ಗಂಟೆಗೆ ಶುರುವಾದ ಬಿಗ್ಬಾಸ್ ಶೋಯಿಂದ ಓರ್ವ ಸ್ಟ್ರಾಂಗ್ ಸ್ಪರ್ಧಿ ಆಚೆ ಬಂದಿದ್ದಾರೆ. ಹೌದು, ಬಿಗ್ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಭವ್ಯಾ ಗೌಡ 5ನೇ ಪೈನಲಿಸ್ಟ್ ಆಗಿ ಆಚೆ ಬಂದಿದ್ದಾರೆ. ಕನ್ನಡ ಕಿರುತೆರೆಯ ಗೀತಾ ಸೀರಿಯಲ್ ಮೂಲಕವೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಬಿಗ್ಬಾಸ್ಗೆ ಎಂಟ್ರಿ ಕೊಟ್ಟು ಕಮಾಲ್ ಮಾಡಿದ್ದರು.
ಬಿಗ್ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಭವ್ಯಾ ಗೌಡ ಎರಡು ಬಾರಿ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದರು. ಕ್ಯಾಪ್ಟನ್ ಪಟ್ಟಕ್ಕಾಗಿ ಬಿಗ್ಬಾಸ್ ಸ್ಪರ್ಧಿಗಳು ನಾ ಮುಂದು ತಾ ಮುಂದು ಅಂತ ಒದ್ದಾಡುತ್ತಾ ಇದ್ದಾರೆ ಅತಿ ಹೆಚ್ಚು ಬಾರಿ ಬಿಗ್ಬಾಸ್ ಮನೆಗೆ ಮಹಿಳಾ ಸ್ಪರ್ಧಿ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದರು .
Tags:
ಬಿಗ್ ಬಾಸ್ ಕನ್ನಡ
